ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಗೊಂಡ ಕಾಡುಪಾಪ ರಕ್ಷಣೆ

Last Updated 21 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಗಾಯಗೊಂಡು ನರಳುತ್ತಿದ್ದ ಕಾಡುಪಾಪವೊಂದನ್ನು ಭಾನುವಾರ ರಕ್ಷಿಸಲಾಯಿತು.

ಮೂರು ವರ್ಷದ ಗಂಡು ಕಾಡುಪಾಪವೊಂದು ಕಬ್ಬನ್‌ ಉದ್ಯಾನದಲ್ಲಿ ಬಿದ್ದಿತ್ತು. ಅದರ ಸುತ್ತ ನಾಯಿಗಳು ಹಾಗೂ ಕಾಗೆಗಳು ಮುತ್ತಿಕೊಂಡಿದ್ದವು. ಬೆಳಿಗ್ಗೆ ವಾಯುವಿಹಾರಕ್ಕೆ ಬಂದಪ್ರೆಸ್‌ಕ್ಲಬ್‌ ಕ್ಯಾಂಟಿನ್‌ ಸಿಬ್ಬಂದಿ ಅದನ್ನುಗಮನಿಸಿ, ಬಿಬಿಎಂಪಿ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಮಾಹಿತಿ ನೀಡಿದರು. ಸ್ವಯಂಸೇವಕರು ಸ್ಥಳಕ್ಕೆ ಧಾವಿಸಿ ಕಾಡುಪಾಪವನ್ನು ರಕ್ಷಿಸಿದರು.

‘ನಾವು ನೋಡಿದಾಗ ಕಾಡುಪಾಪ ಗಾಯಗೊಂಡು ಬಿದ್ದು, ನರಳುತ್ತಿತ್ತು. ಅದರ ಮೈಮೇಲಿನ ಗಾಯ ನೋಡಿ
ದರೆ,ಮಾಟ–ಮಂತ್ರ ಮಾಡಲು ಅದನ್ನು ಬಳಸಿರುವ ಶಂಕೆ ಇದೆ’ ಎಂದುವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಸಿಬ್ಬಂದಿ ತಿಳಿಸಿದರು. ‘ಬೆಂಗಳೂರಿನಂಥ ಐಟಿ ಸಿಟಿಯಲ್ಲಿಮಾಟ–ಮಂತ್ರಗಳನ್ನು ನಂಬುವ ಜನರೂ ಇದ್ದಾರೆ. ಅದಕ್ಕಾಗಿ ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ಬೇಸರದ ವಿಷಯ’ ಎಂದುವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಸ್ವಯಂಸೇವಕ ಎಂ.ಎನ್‌.ಸಿಂಹಾದ್ರಿ ಹೇಳಿದರು.

‘ಕಬ್ಬನ್‌ ಉದ್ಯಾನವು ಮೊದಲು ನಿಶಾಚರಿ ಪ್ರಾಣಿಗಳಆವಾಸಸ್ಥಾನವಾಗಿತ್ತು. ಕಳೆದ ಎರಡು ವರ್ಷಗಳಿಂದ ಆವಾಸಸ್ಥಾನ ಬದಲಾಯಿಸಿವೆ. ಆದ್ದರಿಂದ ಕಬ್ಬನ್‌ ಉದ್ಯಾನದಲ್ಲಿ ಕಾಡುಪಾಪಗಳು ಕಂಡು ಬರುತ್ತಿಲ್ಲ. ಈ ವರ್ಷದಲ್ಲಿ ಕಾಡುಪಾಪವನ್ನು ರಕ್ಷಿಸುತ್ತಿರುವುದು ಇದೇ ಮೊದಲು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT