ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಅಣಬೆ ಉತ್ಪಾದನೆಗೆ ಸೋಲಾರ್ ಆಧಾರಿತ ಯಂತ್ರ

Published:
Updated:
Prajavani

ಹೆಸರಘಟ್ಟ: ಅಣಬೆ ಉತ್ಪಾದನೆಗೆ ಸೋಲಾರ್ ಆಧಾರಿತ ಯಂತ್ರವನ್ನು ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಕೃಷಿ ಯಂತ್ರೋಪಕರಣ ವಿಭಾಗದ ಸೇಂಥಿಲ್ ಮತ್ತು ವಿಣಾ ಪಾಂಡೆ ಈ ಆವಿಷ್ಕಾರ ಮಾಡಿದ್ದಾರೆ. ಈ ಯಂತ್ರದಲ್ಲಿ 80 ಅಣಬೆ ಬೀಜಗಳ ಚೀಲವನ್ನು ಇರಿಸಬಹುದು.

‘ಯಂತ್ರದ ಕೆಳ ಭಾಗದಲ್ಲಿ ನೀರಿನ ತೊಟ್ಟಿಯನ್ನು ಅಳವಡಿಸಲಾಗಿದೆ. ಪ್ರತಿ 30 ನಿಮಿಷಕ್ಕೆ ಒಂದು ಬಾರಿ ನೀರು ಚೀಲಗಳ ಮೇಲೆ ಸ್ವಯಂ ಚಾಲಿತವಾಗಿ ಚಿಮ್ಮಿತ್ತದೆ. ಹೀಗೆ ನೀರು ಚಿಮ್ಮುವುದರಿಂದ ಹೊರಗಿನ ಶಾಖ ಶೇ 6ರಷ್ಟು ಕಡಿಮೆಯಾಗುತ್ತದೆ. ಯಂತ್ರದ ನಾಲ್ಕು ಭಾಗಗಳನ್ನು ಗೋಣಿ ಚೀಲದ ಪರದೆಯಿಂದ ಮುಚ್ಚಲಾಗಿದ್ದು, ಇದು ವಾತಾವರಣವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ’ ಎಂದು ಸೇಂಥಿಲ್ ತಿಳಿಸಿದರು.

‘ನೀರು ಚಿಮ್ಮಿಸಲು ಬೇಕಾದ ಸ್ವಯಂ ಚಾಲಿತ ಮೋಟಾರ್‌ಗೆ ವಿದ್ಯುತ್ ಸಂಪರ್ಕವನ್ನು ಸೋಲಾರ್‌ನಿಂದ ಪಡೆಯಲಾಗುತ್ತದೆ. ಅಣಬೆ ಬೆಳೆಗೆ ಸಾಮಾನ್ಯವಾಗಿ ಪ್ರತಿ 30 ನಿಮಿಷಕ್ಕೆ ನೀರನ್ನು ಕೃಷಿಕರು ನೀಡುತ್ತಾರೆ. ನೀರು  ಅತಿಯಾದರೆ ಬೆಳೆ ಹಾಳಾಗಬಹುದು. ಈ ಯಂತ್ರವನ್ನು ಉಪಯೋಗಿಸುವುದರಿಂದ ಅಣಬೆ ಕೃಷಿಕರಿಗೆ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ’ ಎಂದರು. 

Post Comments (+)