ಸೋಮವಾರ, ಆಗಸ್ಟ್ 19, 2019
21 °C

ತಂತ್ರಜ್ಞಾನ ಆಧರಿತ ಮೂರು ನವೋದ್ಯಮಗಳಿಗೆ ಚಾಲನೆ

Published:
Updated:
Prajavani

ಬೆಂಗಳೂರು: ‘ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಇದು ಇನ್ನೂ ಮುಂದುವರಿಯುತ್ತಲೇ ಇರುತ್ತದೆ. ಈ ಬಗ್ಗೆ ಯಾವುದೇ ಅನುಮಾನವಿಲ್ಲ’ ಎಂದು ಬ್ರಿಗೇಡ್ ಸಮೂಹ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕಿ ನಿರೂಪಾ ಶಂಕರ್ ಅಭಿಪ್ರಾಯಪಟ್ಟರು.

ಬ್ರಿಗೇಡ್‌ ಸಮೂಹ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಇನ್‌ಸ್ಪೈರ್‌ ಎನ್‌ಎಕ್ಸ್‌ಟಿ’ ಕಾರ್ಯಕ್ರಮದಲ್ಲಿ ‘ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವುದು ಹೇಗೆ’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

‘ವಿ–ಗಾಟ್’, ‘ಇಕೊ ಎಸ್‌ಟಿಪಿ’ ಹಾಗೂ ‘ಸ್ಮಾರ್ಟರ್ ಧರ್ಮ’ ಎಂಬ ತಂತ್ರಜ್ಞಾನ ಆಧರಿತ ಮೂರು ನವೋದ್ಯಮಗಳಿಗೆ ಚಾಲನೆ ನೀಡಲಾಯಿತು.

ಬಿಗೇಡ್‌ ಕಮರ್ಷಿಯಲ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ವಿ.ಶರ್ಮ, ‘ವಿ–ಗಾಟ್‌ ನವೋದ್ಯಮವು ನೀರಿನ ಮಿತ ಬಳಕೆಗೆ ತಂತ್ರಜ್ಞಾನದ ನೆರವು ಒದಗಿಸಲಿದೆ. ಇಕೊ ಎಸ್‌ಟಿಪಿಯು ವಿದ್ಯುತ್‌ ಬಳಸದೆಯೇ, ನೈಸರ್ಗಿಕ ವಿಧಾನಗಳಿಂದ ಕೊಳಚೆ ನೀರನ್ನು ಶುದ್ಧೀಕರಿಸಲು ನೆರವಾಗಲಿದೆ. ಸ್ಮಾರ್ಟರ್‌ ಧರ್ಮ ಸಂಸ್ಥೆಯು ವ್ಯಾಪಾರ ವಹಿವಾಟುಗಳಲ್ಲಿ, ಆಡಳಿತದಲ್ಲಿ, ಸಮುದಾಯಗಳು ಹಾಗೂ ಜನರು ಸುಸ್ಥಿರ ಚಿಂತನೆ ಅಳವಡಿಸಿಕೊಳ್ಳುವುದಕ್ಕೆ ಸಹಾಯ ಮಾಡಲಿದೆ’ ಎಂದರು. 

‘ಸೋಲಾರ್ ಹಾಗೂ ನವೀಕರಿಸಬಹುದಾದ ಶಕ್ತಿಯಲ್ಲಿ ಹೂಡಿಕೆ ಮಾಡಿದ್ದೇವೆ. ಕೆರೆ ಹಾಗೂ ಉದ್ಯಾನಗಳ ಪುನರುಜ್ಜೀವನಕ್ಕೆ ಈ ಕಾರ್ಯಕ್ರಮ ಹೆಚ್ಚು ಸಹಕಾರಿ’ ಎಂದು ಅವರು ಹೇಳಿದರು.

Post Comments (+)