ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ

7

ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ

Published:
Updated:

ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ 2ನೇ ಹಂತದಲ್ಲಿ ಬುಧವಾರ ಮೋನಿಶಾ (18) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಹಣ್ಣಿನ ವ್ಯಾಪಾರಿ ಮುತ್ತು ಎಂಬುವರ ಮಗಳಾದ ಮೋನಿಶಾ, ಬುಧವಾರ ಬೆಳಿಗ್ಗೆ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಮನೆಗೆಲಸಕ್ಕೆ ಹೋಗಿದ್ದ ತಾಯಿ, ಮಧ್ಯಾಹ್ನ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಈ ಕುಟುಂಬ, ‘ಅತಿಥಿ ಅಪಾರ್ಟ್‌ಮೆಂಟ್‌’ನ ನೆಲಮಹಡಿಯ ಕೊಠಡಿಯಲ್ಲಿ ನೆಲೆಸಿತ್ತು. ಮೊದಲು ಖಾಸಗಿ ನೇತ್ರಾಲಯದಲ್ಲಿ ಕೆಲಸ ಮಾಡುತ್ತಿದ್ದ ಮೋನಿಶಾ, ಕೆಲ ದಿನಗಳ ಹಿಂದೆ ನೌಕರಿ ತೊರೆದು ಮನೆಯಲ್ಲೇ ಇದ್ದರು.

‘ಮಗಳು ಕೆಲ ದಿನಗಳಿಂದ ಮಂಕಾಗಿದ್ದಳು. ನಮ್ಮ ಜತೆಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳೋ ಗೊತ್ತಿಲ್ಲ’ ಎಂದು ಪೋಷಕರು ಹೇಳಿಕೆ ಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !