ದೂರವಾಣಿ ಕದ್ದಾಲಿಕೆ: ಸುಮಲತಾ ದೂರು

ಗುರುವಾರ , ಏಪ್ರಿಲ್ 25, 2019
33 °C
ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹ ಆರೋಪ

ದೂರವಾಣಿ ಕದ್ದಾಲಿಕೆ: ಸುಮಲತಾ ದೂರು

Published:
Updated:
Prajavani

ಬೆಂಗಳೂರು: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿಸುತ್ತಿದ್ದಾರೆ, ಮನೆ ಬಳಿ ಗುಪ್ತಚರ ಪೊಲೀಸರನ್ನು ಬಿಟ್ಟಿದ್ದಾರೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

‘ಒಂದೂವರೆ ತಿಂಗಳಿಂದ ಮನೆ ಸುತ್ತ ಕಾನೂನು ಬಾಹಿರವಾಗಿ ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದೂರವಾಣಿಯ ಕದ್ದಾಲಿಕೆ ಮಾಡಿಸುತ್ತಿದ್ದಾರೆ, ಜೋಪಾನವಾಗಿರಿ ಎಂದು ಅವರ ಪಕ್ಷದವರೇ ನನಗೆ ಮಾಹಿತಿ ನೀಡಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ದಿನ ಅನಿಯಮಿತ ವಿದ್ಯುತ್ ಪೂರೈಕೆ ಮಾಡುವಂತೆ ಚೆಸ್ಕಾಂಗೆ ಪತ್ರ ಬರೆದಿರುವ ಸಂಬಂಧವೂ ಆಯೋಗಕ್ಕೆ ದೂರು ನೀಡಿದ್ದೇನೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯ ಚುನಾವಣಾಧಿಕಾರಿ ನೀಡಿದ್ದಾರೆ’ ಎಂದು ಸಮಲತಾ ಹೇಳಿದರು.

ದರ್ಶನ್ ಮತ್ತು ಯಶ್ ನನ್ನ ಕುಟುಂಬ ಸದಸ್ಯರು, ಮುಖ್ಯಮಂತ್ರಿಯ ಹೇಳಿಕೆಗಳಿಗೆ ಹೆದರಿ ನನ್ನ ಪರ ಪ್ರಚಾರಕ್ಕೆ ಬರುವುದನ್ನು ಅವರು ನಿಲ್ಲಿಸುವುದಿಲ್ಲ’ ಎಂದರು.

 

ಬರಹ ಇಷ್ಟವಾಯಿತೆ?

 • 35

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !