ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಬಿಸಿಲಿನ ತಾಪ: ನಾಗರಿಕರ ಏದುಸಿರು

ಬಳ್ಳಾರಿಯಲ್ಲಿ 41 ಡಿಗ್ರಿ ಸೆಲ್ಸಿಯಸ್‌ ದಾಖಲು
Last Updated 29 ಮಾರ್ಚ್ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು:ಬಳ್ಳಾರಿಯಲ್ಲಿ ಶುಕ್ರವಾರ 41 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

2017ರ ಮಾರ್ಚ್‌ (28,29,30,31 ತಾರೀಖುಗಳಲ್ಲಿ) ನಲ್ಲಿ ಈ ಪ್ರಮಾಣದ ಬಿಸಿಲು ದಾಖಲೆಯಾಗಿತ್ತು. ಈ ವರ್ಷ ಬಳ್ಳಾರಿಯ ಕೆಲವು ಭಾಗಗಳಲ್ಲಿ ಈ ಎರಡು ದಿನಗಳಲ್ಲಿ 42 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಈವರೆಗಿನ ದಾಖಲೆ.

ಕಲಬುರ್ಗಿ 41, ರಾಯಚೂರು 40, ವಿಜಯಪುರ 39, ಚಿತ್ರದುರ್ಗ, ಗದಗ 37, ಬೆಳಗಾವಿ, ಧಾರವಾಡ 36, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ಕಾರವಾರ 35 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

ಎರಡ್ಮೂರು ದಿನ ಮಳೆ ಸಾಧ್ಯತೆ: ಉತ್ತರ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಗಿ ಕಾಣಿಸಿಕೊಂಡಿದ್ದು, ದಕ್ಷಿಣ ಒಳನಾಡಿನಿಂದ ಬಂಗಾಳ ಕೊಲ್ಲಿ ತನಕ (ಟ್ರಫ್‌) ವಾಯುಭಾರ ಏರಿಕೆ ಕಂಡಿದ್ದರಿಂದ ರಾಜ್ಯದಲ್ಲಿ ಎರಡು ಮೂರು ದಿನಗಳ ಕಾಲ ಹಗುರದಿಂದ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟಕ ಭಾಗಗಳ ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದರಿಂದ ಬೆಳೆಗೆ ಹೊಡೆತ ಬಿದ್ದಿದೆ.ಇದು, ಬಿಸಿಲಿನ ಝಳದಿಂದಾಗಿ ಆಗುವ ಮಳೆ. ಹಾಗಾಗಿ, 10 ರಿಂದ 20 ನಿಮಿಷಗಳ ಕಾಲ ಮಾತ್ರ ಮಳೆ ಸುರಿಯುತ್ತದೆ. ಈ ಸಂದರ್ಭದಲ್ಲಿ ಎರಡರಿಂದ ಮೂರು ನಿಮಿಷವಷ್ಟೇ ಆಲಿಕಲ್ಲು ಮಳೆ ಬಿದ್ದರೂ ಬೆಳೆಗಳಿಗೆ ಹಾನಿಯೊಡ್ಡಲಿದೆ.

ಗುರುವಾರ, ಗದಗನಲ್ಲಿ 18 ಮೀ.ಮೀ ಪ್ರಮಾಣದ ಚದುರಿದ ಮಳೆಯಾಗಿದೆ. ಅಲ್ಲದೇ,ವಿಜಯಪುರದಲ್ಲಿ 2 ರಿಂದ 4 ಮೀ.ಮೀ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ, ಹಾವೇರಿಯ ಕೆಲವೆಡೆ ಅಲ್ಲಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT