ಯುವಜನತೆ ಎದೆಯಲ್ಲಿ ಕಿಚ್ಚು ಹಚ್ಚಿದ ಸನ್ನಿ

7

ಯುವಜನತೆ ಎದೆಯಲ್ಲಿ ಕಿಚ್ಚು ಹಚ್ಚಿದ ಸನ್ನಿ

Published:
Updated:

ಬೆಂಗಳೂರು: ‘ನಾನು ನಿಮ್ಮನ್ನು ತುಂಬಾ ತುಂಬಾ ಪ್ರೀತಿಸ್ತೇನೆ’ ಎಂದು ನಿರೂಪಕ ಹೇಳಿಕೊಟ್ಟಿದ್ದನ್ನು ಕನ್ನಡದಲ್ಲಿ ಸ್ಪಷ್ಟವಾಗಿ ಉಲಿದ ಸನ್ನಿ ಲಿಯೋನ್, ಬೆಂಗಳೂರಿನ ತರುಣ–ತರುಣಿಯರ ಎದೆಯಲ್ಲಿ ಶೃಂಗಾರದ ಕಿಚ್ಚು ಹಚ್ಚಿಸಿದರು.

ನಗರದ ಮಾನ್ಯತಾ ಟೆಕ್‌ಪಾರ್ಕ್‌ಗೆ ಹೊಂದಿಕೊಂಡ ವೈಟ್ ಆರ್ಕಿಡ್ ಕನ್ವೆಷನ್‌ ಸೆಂಟರ್‌ ಒಳಾಂಗಣದಲ್ಲಿ ಶರದೃತುವಿನ ಶನಿವಾರದ ರಾತ್ರಿಯನ್ನು ಸವಿ ನೆನಪಾಗಿಸಿದರು.

ಟೈಮ್ಸ್‌ ಕ್ರಿಯೇಷನ್ಸ್‌ ಆಯೋಜಿಸಿದ್ದ ‘ಫ್ಯೂಷನ್ ನೈಟ್ಸ್‌’ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್‌ (ಕರಣ್‌ಜೀತ್ ಕೌರ ವೊಹ್ರಾ) ಮೂರು ಹಿಂದಿ ಹಾಗೂ ಒಂದು ಕನ್ನಡ ಹಾಡಿಗೆ ಹೆಜ್ಜೆ ಹಾಕಿದರು.

‘ಬಾರವ್ವ ಬಾರೆ, ತೋರವ್ವ ತೋರವ್ವ ತೋರೆ’ ಎಂಬ ಹಾಡಿಗೆ ಹಸಿರು ಬಣ್ಣದ ಮೈಕ್ರೊ ಮಿಡಿ ಹಳದಿ ಬಣ್ಣದ ಸ್ಲೀವ್ ಲೆಸ್‌ಟಾಪ್‌ನಲ್ಲಿ ಬಳ್ಳಿಯಂತೆ ಬಳುಕಿ ಕುಣಿದರು. ಆಯೋಜಕರಾದ ಎಚ್.ಎಸ್.ಭವ್ಯ ಹಾಗೂ ಅವರ ಪತಿ ಹರೀಶ್, ಗಂಧದ ಪೆಟ್ಟಿಗೆಯಲ್ಲಿ ಕನ್ನಡ ಕಂಪು ಸೂಸುವ ಬಾಗಿನ ನೀಡಿ ಅವರನ್ನು ಸನ್ಮಾನಿಸಿದರು.

ಮೋಟು ಜಡೆಗೆ ಮಲ್ಲಿಗೆ ಹೂ ಮುಡಿದು, ‘ಹರ್ ಕೋಯಿ ಚಾಹೆ ಮುಝಸೆ ಮಿಲನಾ ಅಕೇಲಾ’ ಹಾಗೂ ‘ಲೈಲಾ ಮೈ ಲೈಲಾ’ ಹಾಡಿನಲ್ಲಿ ವೀಕ್ಷಕರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಯುವಜನತೆ ಅಬ್ಬರದ ಡಿಜೆ ಸದ್ದಿಗೆ ಮೈಚಳಿ ಬಿಟ್ಟು ಕುಣಿದರು, ಸೆಲ್ಫಿಗಳ ಕ್ಲಿಕ್ಕಿಸಿಕೊಂಡು ತನು ತಣಿಸಿಕೊಂಡರು.

ಇದೇ ವೇಳೆ ರಘು ದೀಕ್ಷಿತ್‌ ಗಾಯನ ಪ್ರಸ್ತುತಪಡಿಸಿದರು.

ತಕ್ಕ ಉತ್ತರ: ‘ಕನ್ನಡದ ನೆಲದಲ್ಲಿ ಸನ್ನಿ ಕಾಲಿಡಬಾರದು ಎಂದಿದ್ದ ಜನಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ’
ಎಂದು ಆಯೋಜಕ ಹರೀಶ್ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !