ಶುಕ್ರವಾರ, ಸೆಪ್ಟೆಂಬರ್ 17, 2021
25 °C

ಅನುದಾನ ಕಡಿತಗೊಳಿಸದಂತೆ ಸುರೇಶ್‌ಕುಮಾರ್ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಸಕರ ಕ್ಷೇತ್ರಾಭಿವೃದ್ಧಿಗೆ ನಿಗದಿಯಾಗಿರುವ ಅನುದಾನ ಕಡಿತಗೊಳಿಸಲು ಮುಂದಾದರೆ ಪರಿಣಾಮ ಯಾವ ಮಟ್ಟಕ್ಕಾದರೂ ಹೋಗಬಹುದು’ ಎಂದು ಬಿಜೆಪಿ ಶಾಸಕ ಎಸ್. ಸುರೇಶ್‌ಕುಮಾರ್‌ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಹೆಚ್ವುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರಿಗೆ ಸುರೇಶ್‌ ಕುಮಾರ್ ಬರೆದಿರುವ ಪತ್ರದಲ್ಲಿ ‘ನನ್ನ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ನಡೆದುಕೊಂಡೇ ಬಂದಿದೆ. ಈ ವರ್ಷ ಪಕ್ಕದ ಕ್ಷೇತ್ರಕ್ಕೆ ಸುಮಾರು ₹400 ಕೋಟಿ ನೀಡಲಾಗಿದ್ದು, ನನ್ನ ಕ್ಷೇತ್ರಕ್ಕೆ ₹105 ಕೋಟಿ ನೀಡಲಾಗಿದೆ’ ಎಂದಿದ್ದಾರೆ.

‘ಇದರಲ್ಲಿಯೂ ₹35 ಕೋಟಿ ಕಡಿತಗೊಳಿಸಿ ತಾವು ಸೂಚಿಸಿದ ಜಾಗಕ್ಕೆ ನೀಡಬೇಕೆಂದು ಸರ್ಕಾರದಲ್ಲಿರುವ ಪ್ರಮುಖರೊಬ್ಬರು ಬರೆದಿರುವ ಪತ್ರ ನಿಮ್ಮ ಕಚೇರಿಗೆ ಬಂದಿರುವ ಮಾಹಿತಿ ಇದೆ. ನನ್ನ ಅನುದಾನದಲ್ಲಿ ಒಂದು ರೂಪಾಯಿ ಕಡಿತವಾದರೂ ಪರಿಣಾಮ ಬೇರೆಯೇ ಆಗಲಿದೆ ಎಂಬುದನ್ನು ವಿನಮ್ರವಾಗಿ ತಿಳಿಸುತ್ತಿದ್ದೇನೆ’ ಎಂದು ಎಚ್ಚರಿಸಿದ್ದಾರೆ.

‘ಬಿಜೆಪಿ ಶಾಸಕರ ಅನುದಾನ ಕಡಿತಗೊಳಿಸಲು ಮುಂದಾಗಿರುವ ಖಚಿತ ಮಾಹಿತ ಆಧರಿಸಿ ಈ ಪತ್ರ ಬರೆದಿದ್ದೇನೆ’ ಎಂದು ಸುರೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು