ತನಿಷ್ಕ್‌ನಿಂದ ಉಮಂಗ್‌–ತರಂಗ್‌

7

ತನಿಷ್ಕ್‌ನಿಂದ ಉಮಂಗ್‌–ತರಂಗ್‌

Published:
Updated:

ಬೆಂಗಳೂರು: ತನಿಷ್ಕ್‌ ಆಭರಣ ಸಂಸ್ಥೆಯ ಆಶ್ರಯದಲ್ಲಿ ಕೋರಮಂಗಲದ ಸ್ವರಾರಂಭ್‌ ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳು ‘ಉಮಂಗ್‌ ತರಂಗ್‌’ ಹೆಸರಿನ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಇಂದಿರಾನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳು ಹಿಂದೂಸ್ತಾನಿ, ಲಘು ಶಾಸ್ತ್ರೀಯ ಮತ್ತು ಜನಪದ ಸಂಗೀತ ಪ್ರಸ್ತುತಪಡಿಸಿದರು. ಯಮನ್‌ ರಾಗದಲ್ಲಿ ಕೀರ್ತನೆಯಿಂದ ಆರಂಭವಾದ ಕಾರ್ಯಕ್ರಮ ಕಾಮಾಜ್‌ ರಾಗದ ವಿವಿಧ ಹಾಡುಗಾರಿಕೆಯಲ್ಲಿ ಮುಂದುವರಿಯಿತು. ರಾಗ ಜೋಗ್‌ದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.

ಸ್ವರಾರಂಭ್‌ ಸಂಸ್ಥೆಯ ಮುಖ್ಯಸ್ಥರಾದ ಮಾಳವಿಕಾ ನಿರಜನ್‌ ಮಾತನಾಡಿ, ‘ಇಂದು ಮಕ್ಕಳು ಮತ್ತು ಯುವಜನರನ್ನು ಶಾಸ್ತ್ರೀಯ ಸಂಗೀತ ಮತ್ತು ನೃತ್ಯದತ್ತ ಹಿಡಿದಿಡುವುದು ಸವಾಲಾಗಿದೆ. ಅವರಿಗೆ ಕಲಿಸುತ್ತಾ, ಹೊಸದನ್ನು ಹುಡುಕುತ್ತಾ ಕಲಾ ಕ್ಷೇತ್ರದಲ್ಲಿ ಮುಂದುವರಿಯುವುದರಲ್ಲಿ ಸಂತಸವಿದೆ’ ಎಂದು ಹೇಳಿದರು.

ತನಿಷ್ಕ್‌ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಂದೀಪ್‌ ಕುಲ್ಹಳ್ಳಿ ಮಾತನಾಡಿ, ‘ಈ ರೀತಿಯ ಕಾರ್ಯಕ್ರಮಗಳನ್ನು ಬೆಂಬಲಿಸುವುದರಿಂದ ನಮ್ಮ ಶ್ರೀಮಂತ ಸಂಸ್ಕೃತಿಗೆ ಹೊಸ ಜೀವ ಕೊಟ್ಟಂತಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !