ಭಾನುವಾರ, ಅಕ್ಟೋಬರ್ 20, 2019
27 °C

ಶಿಕ್ಷಕರಿಗೆ ಸ್ಥಳದಲ್ಲೇ ಆದೇಶ ಪತ್ರ

Published:
Updated:

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆದ ಸ್ಥಳದಲ್ಲೇ ವರ್ಗಾವಣೆ ಆದೇಶ ಪತ್ರ ನೀಡಲು ಶಿಕ್ಷಣ ಇಲಾಖೆ ಕೊನೆಗೂ ಮುಂದಾಗಿದೆ.

ಸ್ಥಳ ಆಯ್ಕೆ ಮಾಡಿಕೊಂಡವರಿಗೆ ಡಿಡಿಪಿಐ ಕಚೇರಿಗಳಿಗೆ ವರ್ಗಾವಣೆ ಆದೇಶ ಪತ್ರ ಕಳುಹಿಸಿ ಕೊಡಲಾಗುತಿತ್ತು. ನಂತರ ಶಿಕ್ಷಕರಿಗೆ ವಿತರಣೆ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. ಈ ವ್ಯವಸ್ಥೆ ಬದಲಿಸಿದ್ದು, ಧಾರವಾಡ ವಿಭಾಗದಲ್ಲಿ ಅಂತರ್ ಘಟಕದ ಕೋರಿಕೆ ವರ್ಗಾವಣೆಯಲ್ಲಿ ಸ್ಥಳ ನಿಯುಕ್ತಿ ಮಾಡಿಕೊಂಡ ಶಿಕ್ಷಕರಿಗೆ ಸ್ಥಳದಲ್ಲೇ ಆದೇಶ ಕೊಡಲಾಗಿದೆ.

ಬೆಂಗಳೂರಿನಲ್ಲಿ ಕೌನ್ಸೆಲಿಂಗ್‌ ಪ್ರಕ್ರಿಯೆ ಮುಗಿದಿದ್ದು, ಅಂತರ್‌ ಘಟಕ ವಿಭಾಗದಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಇನ್ನೂ ವರ್ಗಾವಣೆ ಆದೇಶ ನೀಡದ ಬಗ್ಗೆ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Post Comments (+)