ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿಗಾಗಿ ಮತ ಕೇಳುವ ಸೂರ್ಯ ಬೇಕಾ?’

Last Updated 11 ಏಪ್ರಿಲ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮೋದಿಗಾಗಿ ವೋಟ್ ಕೇಳುತ್ತಾರೆ. ಸಂವಿಧಾನ ಸುಡಲು ಹೇಳುತ್ತಾರೆ. ಮಹಿಳಾ ಮೀಸಲಾತಿ ಬೇಡ ಅಂತಾರೆ. ಇಂಥವರು ನಮಗೆ ಬೇಕಾ?...’

ಜಯನಗರದ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಡನೆ ಸಂವಾದದ ವೇಳೆ ಶಾಸಕಿ ಸೌಮ್ಯಾರೆಡ್ಡಿ ಈ ರೀತಿ ಪ್ರಶ್ನಿಸಿದರು.

‘ಈ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಬಲ ಸ್ಪರ್ಧೆ. ಜಾತಿ ಭೇದವಿಲ್ಲದೆ ಒಗ್ಗಟ್ಟಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವುದು ಕಾಂಗ್ರೆಸ್ ಮಾತ್ರ. ಬಿಜೆಪಿಯವರು ಕೊಟ್ಟ ಆಶ್ವಾಸನೆಗಳನ್ನು ನೆರವೇರಿಸಿದೆಯೇ ಎಂಬುದನ್ನು ನಾವು ಚಿಂತಿಸಬೇಕು’ ಎಂದು
ತಿಳಿಸಿದರು.

ಬಿ.ಕೆ.ಹರಿಪ್ರಸಾದ್, ‘ವಿದ್ಯಾರ್ಥಿಗಳ ಶಕ್ತಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ನಡೆಸುತ್ತಿದ್ದ ಪ್ರತಿಭಟನೆಗಳಿಂದ ಸರಕಾರಗಳೇ ಬದಲಾಗುತ್ತಿದ್ದವು. ಆದರೀಗ ನಮಗೇಕೆ ಎನ್ನುವ ಭಾವನೆ ಬಂದಿದೆ’ ಎಂದು ಹೇಳಿದರು.

‘ಮೋದಿ ಅವರಿಗೆ 65 ವರ್ಷ. ಎಲ್ಲೇ ಹೋದರು ಯುವಕರು ಮೋದಿ ಎಂದು ಕೂಗುತ್ತಾರೆ. ಈ ಐದು ವರ್ಷದಲ್ಲಿ ಮೋದಿ ಅವರು ವಿದ್ಯಾರ್ಥಿಗಳಿಗೆ ಏನು ಮಾಡಿದ್ದಾರೆ. ಸಮೃದ್ಧ ಭಾರತಕ್ಕೆ ಗಾಂಧಿ ಅನುಸರಿಸಬೇಕೋ ಅಥವಾ ನಾತೂರಾಮ್‌ ಗೋಡ್ಸೆಗೆ ಬೆಂಬಲ ನೀಡುತ್ತೀರೋ ಯೋಚಿಸಿ ಮತ ನೀಡಿ’ ಎಂದು ಅವರು ಮನವಿ
ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT