ಹೊಸ ಟ್ವಿಟರ್‌ ಖಾತೆ ತೆರೆದ ತೇಜಸ್ವಿನಿ ಅನಂತಕುಮಾರ್‌

7

ಹೊಸ ಟ್ವಿಟರ್‌ ಖಾತೆ ತೆರೆದ ತೇಜಸ್ವಿನಿ ಅನಂತಕುಮಾರ್‌

Published:
Updated:

ಬೆಂಗಳೂರು: ದಿವಂಗತ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ‘ತೇಜ್‌ಅನಂತಕುಮಾರ್’ ಹೆಸರಿನಲ್ಲಿ ಹೊಸ ಟ್ವಿಟರ್‌ ಖಾತೆ ಆರಂಭಿಸಿದ್ದಾರೆ.

ತೇಜಸ್ವಿನಿಯವರು ಹಲವು ವರ್ಷಗಳಿಂದ ಪರಿಸರ, ಸಾಮಾಜಿಕ ಕಳಕಳಿ ಕುರಿತು ಟ್ವೀಟ್‌ ಮಾಡುತ್ತಿದ್ದರು. ಇನ್ನು ಮುಂದೆ ‘ತೇಜ್‌ಅನಂತಕುಮಾರ್‌’ ಹೆಸರಿನಲ್ಲಿ ಖಾತೆ ಬಳಸುವುದಾಗಿ ಹೇಳಿಕೊಂಡಿದ್ದಾರೆ. 

ಈ ಹಿಂದಿನ ಟ್ವಿಟರ್‌ ಖಾತೆಯಲ್ಲಿ ತಮ್ಮ ಪರಿಚಯವನ್ನು ಎಂಜಿನಿಯರ್‌, ಅದಮ್ಯ ಚೇತನದ ಮುಖ್ಯಸ್ಥೆ, ಇಬ್ಬರು ಹೆಣ್ಣು ಮಕ್ಕಳ ತಾಯಿ ಎಂದು ನಮೂದಿಸಿದ್ದರು. ಹೊಸ ಖಾತೆಯಲ್ಲಿ ಸಸ್ಯ ಸಂಪತ್ತಿನ ಚಿತ್ರ, ಹಿನ್ನೆಲೆಯಲ್ಲಿ ಅನಂತಕುಮಾರ್‌ ಮತ್ತು ದಿವಂಗತ ನಾಯಕ ವಿಜಯಕುಮಾರ್‌ ಜತೆಯಲ್ಲಿರುವ ಚಿತ್ರವನ್ನು ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !