ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಪ್ರಸಾದ ಸೇವಿಸಿ 65 ಮಂದಿ ಅಸ್ವಸ್ಥ

Last Updated 28 ಏಪ್ರಿಲ್ 2019, 18:38 IST
ಅಕ್ಷರ ಗಾತ್ರ

ಶಿರಾ : ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ್ದ ಅಸ್ವಸ್ಥರಾದ ಸುಮಾರು 80 ಕ್ಕೂ ಮಂದಿ ಭಾನುವಾರ ಶಿರಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿನ್ನಪ್ಪನಹಳ್ಳಿ ಗ್ರಾಮದ ಮರಿಯಣ್ಣ ಎನ್ನುವರು ಶನಿವಾರ ರಾತ್ರಿ ಆಂಜನೇಯಸ್ವಾಮಿಗೆ ಪೂಜೆ ಮಾಡಿಸಿ ಗ್ರಾಮಸ್ಥರಿಗೆ ಸಿಹಿ ಊಟ ಹಾಕಿಸಿದ್ದರು. ಭಾನುವಾರ ಬೆಳಿಗ್ಗೆ ಊಟ ಮಾಡಿದ್ದ ಕೆಲವರಿಗೆ ವಾಂತಿ, ಭೇದಿ, ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಕಳ್ಳಂಬೆಳ್ಳ ಗ್ರಾಮದ ಸಕಾ೯ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ತೆರಳಿದ್ದಾರೆ.

ಆದರೆ ಮಧ್ಯಾಹ್ನದ ನಂತರ ಹೆಚ್ಚಿನ ಜನರಿಗೆ ವಾಂತಿ, ಬೇದಿ, ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಗ್ರಾಮದಲ್ಲಿ ಹೆಚ್ಚು ಜನರು ಆಸ್ವಸ್ಥರಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಂಬುಲೆನ್ಸ್ ಕಳುಹಿಸಿ ರೋಗಿಗಳನ್ನು ಕರೆ ತರುವ ಕೆಲಸ ಮಾಡಲಾಯಿತು.

ಕಿರಣ್ ಕುಮಾರ್, ತಿಪ್ಪಯ್ಯ, ಲಿಂಗಪ್ಪ, ಜಯಪ್ರಕಾಶ್, ಸುಶೀಲಮ್ಮ, ಗಂಗಮ್ಮ, ಭೂತಣ್ಣ, ಪದ್ಮ, ರತ್ನಮ್ಮ, ರಾಮಕೃಷ್ಣಯ್ಯ, ಲಕ್ಷ್ಮಮ್ಮ, ಸಾವಿತ್ರಮ್ಮ, ಭುವನೇಶ್ವರಿ, ಸಿದ್ದರಾಜು, ದೇವರಾಜು, ಸಿದ್ದಮ್ಮ, ತಿಪ್ಪೇರಂಗಮ್ಮ ಸೇರಿದಂತೆ ಸುಮಾರು 80 ಮಂದಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತೀವ್ರವಾಗಿ ಆಸ್ವಸ್ಥರಾಗಿದ್ದ 45 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಆಸ್ಪತ್ರೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುಡಿಮಡು ರಂಗಶ್ವಾಮಯ್ಯ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗನಾಥ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ರವಿಶಂಕರ್, ಪಡಿ ರಮೇಶ್ ಮುಂತಾದವರು ಬೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಿಕೊಡುವ ಕೆಲಸ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT