ಎಚ್‌ಟಿಟಿ 40 ವಿಮಾನದ ಗಿರಕಿ ಪರೀಕ್ಷೆ ಯಶಸ್ವಿ

7

ಎಚ್‌ಟಿಟಿ 40 ವಿಮಾನದ ಗಿರಕಿ ಪರೀಕ್ಷೆ ಯಶಸ್ವಿ

Published:
Updated:
Deccan Herald

ಬೆಂಗಳೂರು: ಎಚ್‌ಎಎಲ್‌ನ ‘ಎಚ್‌ಟಿಟಿ 40’ ತರಬೇತಿ ವಿಮಾನವು ಆಗಸದಲ್ಲಿ ಗಿರಕಿ ಹೊಡೆಯುವ (ಸ್ಪಿನ್‌ ಟೆಸ್ಟ್‌) ಪರೀಕ್ಷೆಯನ್ನು ಯಶಸ್ವಿ ನಡೆಸಿದೆ.

ಇಬ್ಬರು ಪೈಲಟ್‌ಗಳು ಶುಕ್ರವಾರ ಆಗಸದಲ್ಲಿ ಈ ವಿಮಾನವನ್ನು ಎರಡು ಸುತ್ತು ಗಿರಕಿ ಹೊಡೆಸಿದ ಬಳಿಕ ನಿಯಂತ್ರಣಕ್ಕೆ ತೆಗೆದುಕೊಂಡರು. ಇದೇ ಮೊದಲ ಬಾರಿಗೆ ಎಚ್‌ಟಿಟಿ 40 ವಿಮಾನದ ಗಿರಕಿ ಹೊಡೆಯುವ ಪರೀಕ್ಷೆ ನಡೆಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌, ಗಿರಕಿ ಹೊಡೆಯುವ ಪರೀಕ್ಷೆ ಯಶಸ್ವಿ ಆಗಿರುವುದು, ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ ಎಂದು ಹೇಳಿದ್ದಾರೆ.

ಯಾವುದೇ ವಿಮಾನದ ಅಭಿವೃದ್ಧಿಯಲ್ಲಿ ಗಿರಕಿ ಪರೀಕ್ಷೆ  ಅತ್ಯಂತ ಮಹತ್ವದ ಸವಾಲಾಗಿದೆ. ಎಚ್‌ಎಎಲ್‌ನ ವಿಮಾನ ಸಂಶೋಧನೆ ಮತ್ತು ವಿನ್ಯಾಸ ವಿಭಾಗದಲ್ಲಿ ವ್ಯಾಪಕವಾಗಿ ವಿಂಡ್‌ ಟನೆಲ್‌ ಪರೀಕ್ಷೆಯನ್ನು ನಡೆಸಲಾಗಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !