ಮಲೇಷ್ಯಾದಲ್ಲಿ ಸಿಂಚನಾ ಸಾಧನೆ

7

ಮಲೇಷ್ಯಾದಲ್ಲಿ ಸಿಂಚನಾ ಸಾಧನೆ

Published:
Updated:
Deccan Herald

ಬೆಂಗಳೂರು: ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಚಿಕ್ಕಬಾಣಾವರ ಗ್ರಾಮದ ಸಿಂಚನಾ ಕೆ. ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ ಅಂತರರಾಷ್ಟ್ರೀಯಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ಚಿನ್ನದ ಪದಕಗಳಿಸಿದ್ದಾರೆ.

ಅ. 26ರಿಂದ 28ರವರೆಗೆ ನಡೆದ ಬಾಲಕಿಯರ ವಿಭಾಗದಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದಾರೆ.ಅವರು ಮಲ್ಲೇಶ್ವರದ ಮಹಾರಾಣಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ. ‘ನಿರಂತರ ಅಭ್ಯಾಸದಿಂದ ಈ ಪದಕ ಗೆಲ್ಲಲು ಸಾಧ್ಯವಾಯಿತು’ ಎನ್ನುತ್ತಾರೆ ಅವರು. ‘ಮಲೇಷ್ಯಾದಲ್ಲಿ ಆಟ ಆಡಲು ಅಯ್ಕೆಯಾದಾಗ ಕೊಂಚ ಅಧೀರಳಾದೆ. ನನ್ನ ತಂದೆ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ಬರುವ ಸಂಬಳ₹ 15 ಸಾವಿರ. ನಾವು ನಾಲ್ಕು ಜನ ಹೆಣ್ಣು ಮಕ್ಕಳು. ಹೋಗುವುದು ಬೇಡವೆಂದು ಸುಮ್ಮನಿದ್ದೆ. ಆದರೆ ಅಪ್ಪ ಬ್ಯಾಂಕ್ ಸಾಲ ಮಾಡಿ ಕಳುಹಿಸಿದರು.

ಮಗಳು ಏನಾದರೂ ಸಾಧನೆ ಮಾಡಬಲ್ಲಳು ಎನ್ನುವ ವಿಶ್ವಾಸ ಅವರಿಗೆ ಇತ್ತು’ ಎಂದು ಸಿಂಚನಾ ಹೇಳಿದರು. ಸಿಂಚನಾ ಅವರ ತಂದೆ ಕೃಷ್ಣ ನಾಯಕ್ ಪ್ರತಿಕ್ರಿಯಿಸಿ ‘ಮಗಳಲ್ಲಿ ಸಾಧಿಸುವ ಛಲ ಇದೆ. ಅದಕ್ಕೆ ಬೇಕಾದ ಪರಿಶ್ರಮವನ್ನು ಹಾಕುತ್ತಾಳೆ. ಈ ಮನೋಭಾವನೆಯೇ ಅವಳು ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಹೇಳಿದರು. ತರಬೇತುದಾರ ಪಿ.ಎಂ.ಅರ್ಕಶ್ ಅವರು ‘ಆಟವಾಡುವಾಗ ಸಿಂಚನಾಳ ಮನಸ್ಸು ಬೇರೆ ಕಡೆ ಹರಿದಾಡುವುದಿಲ್ಲ. ಇದನ್ನು ಹೀಗೆ ಮುಂದುವರಿಸಿ ಕೊಂಡು ಹೋದರೆ ಒಳ್ಳೆಯ
ಆಟಗಾರ್ತಿಯಾಗಿರುತ್ತಾರೆ’ ಎಂದು ವಿಶ್ವಾಸದಿಂದ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !