ಕಿಟಕಿಯಿಂದಲೇ ದೋಚುತ್ತಿದ್ದ!

7

ಕಿಟಕಿಯಿಂದಲೇ ದೋಚುತ್ತಿದ್ದ!

Published:
Updated:

ಬೆಂಗಳೂರು: ಕಿಟಕಿಯಿಂದ ಕೈಹಾಕಿ ಮೊಬೈಲ್ ಹಾಗೂ ಚಿನ್ನದ ಸರಗಳನ್ನು ದೋಚುತ್ತಿದ್ದ ಮಂಜುನಾಥ ಅಲಿಯಾಸ್ ಕಿಟಕಿ ಮಂಜ (26) ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ ಮಂಡ್ಯ ಜಿಲ್ಲೆಯವನಾದ ಈತ, ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ.

ರಾತ್ರಿ ವೇಳೆ ಪ್ರಮುಖ ರಸ್ತೆಗಳಲ್ಲಿ ಓಡಾಡಿ ಕಿಟಕಿ ತೆರೆದಿರುವ ಮನೆಗಳನ್ನು ಹುಡುಕುತ್ತಿದ್ದ ಆರೋಪಿ, ಒಳಗೆ ಕೈಹಾಕಿ ಕಿಟಕಿ ಪಕ್ಕ ಮಲಗಿರುವವರ ಸರ ಹಾಗೂ ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಂಜುನಾಥನ ವಿರುದ್ಧ ಗಿರಿನಗರ ಠಾಣೆಯಲ್ಲೇ ಮೂರು ಪ್ರಕರಣಗಳು ದಾಖಲಾಗಿದ್ದವು. ಗುರುವಾರ ರಾತ್ರಿ ಹೊಯ್ಸಳ ಸಿಬ್ಬಂದಿ ಈತನನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಮೊಬೈಲ್, ಎರಡು ಚಿನ್ನದ ಸರ ಹಾಗೂ ಸ್ಕೂಟರ್‌ ಕೀಯನ್ನು ಜಪ್ತಿ ಮಾಡಲಾಗಿದೆ. 15 ದಿನಗಳ ಹಿಂದೆ ಮನೆಯೊಂದರ ಕಿಟಕಿಯಿಂದ ಕೀ ಎತ್ತಿಕೊಂಡಿದ್ದ ಆತ, ಸ್ಕೂಟರ್ ಚಾಲೂ ಮಾಡಿಕೊಂಡು ಹೊರಟಿದ್ದ. ಈ ವೇಳೆ ಮನೆ
ಯವರು ಹೊರಗೆ ಬಂದಿದ್ದರಿಂದ ಸ್ಕೂಟರ್ ಅಲ್ಲೇ ಬಿಟ್ಟು ಕೀ ಸಮೇತ ಪರಾರಿಯಾಗಿದ್ದ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !