ಹುಲಿ, ಚಿರತೆಯ 142 ಉಗುರುಗಳು ವಶಕ್ಕೆ
ಬೆಂಗಳೂರು: ಬೆಲೆ ಬಾಳುವ ಹುಲಿ ಮತ್ತು ಚಿರತೆಯ ಉಗುರುಗಳನ್ನು ಮಾರಾಟ ಮಾಡಲು ನಗರಕ್ಕೆ ಬಂದಿದ್ದ ಮಂಡ್ಯ ಮೂಲದ ಮೂವರು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 142 ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯದ ನಾಗಮಂಗಲ ತಾಲ್ಲೂಕಿನ ತುಪ್ಪದಮೂಡು ನಿವಾಸಿ ಕವಿತ್‍ಕುಮಾರ್(23), ಗೋಪಿರಾಜ್ ಅಲಿಯಾಸ್ ಗೋಪಿ (25) ಮತ್ತು ಸಂಜಯ್ (21) ಬಂಧಿತರು.
‘ಆರೋಪಿಗಳೆಲ್ಲರೂ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದರು. ಹೆಚ್ಚಿನ ಹಣವನ್ನು ಗಳಿಸುವ ಸಲುವಾಗಿ ಅಕ್ರಮ ದಂಧೆಗೆ ಕಾಲಿಟ್ಟರು. ಮೈಸೂರಿನ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರ ಗ್ರಾಮದ ಕೆಲ ವ್ಯಕ್ತಿಗಳು ಹುಲಿ, ಚಿರತೆಗಳನ್ನು ಕೊಂದು ಅವುಗಳ ಚರ್ಮ ಹಾಗೂ ಉಗುರುಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ಅವರಿಗಾಗಿ ಶೋಧ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಹುಲಿ ಹಾಗೂ ಚಿರತೆ ಉಗುರುಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಪ್ರತಿ ಉಗುರಿಗೆ ₹ 2 ರಿಂದ 3 ಲಕ್ಷದಂತೆ ಮಾರಾಟ ಮಾಡುತ್ತಿದ್ದರು’ ಎಂದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All