ಕೈ–ಕಮಲ ‘ತಿಲಕ’ ಗಲಾಟೆ

ಶುಕ್ರವಾರ, ಮಾರ್ಚ್ 22, 2019
28 °C

ಕೈ–ಕಮಲ ‘ತಿಲಕ’ ಗಲಾಟೆ

Published:
Updated:

ಬೆಂಗಳೂರು: ‘ತಿಲಕ ಹಾಕಿಕೊಂಡವರನ್ನು ನೋಡಿದರೆ ಭಯವಾಗುತ್ತದೆ’ ಎಂಬ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ಗುರುವಾರವೂ ಮುಂದುವರಿದಿದೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಿದ್ದರಾಮಯ್ಯ ಅವರು, ‘ಉತ್ತರ ಪ್ರದೇಶದಲ್ಲೊಬ್ಬರು ಬಿಜೆಪಿ ಮುಖ್ಯಮಂತ್ರಿ ಇದ್ದಾರೆ. ಮೈತುಂಬಾ ಕಾವಿ ಬಟ್ಟೆ, ಮುಖ ತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ, ಅವರ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್‌ಗಳಿವೆ. ಈ ಕುಂಕುಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ?’ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಟ್ವಿಟರ್‌ನಲ್ಲಿ ತೀಕ್ಷ್ಮ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ‘ಕರ್ನಾಟಕದಲ್ಲಿ ಒಬ್ಬರು ಬಿಳಿ ಅಂಗಿ ಬಿಳಿ ಪಂಚೆ ತೊಟ್ಟ ಮಾಜಿ ಮುಖ್ಯಮಂತ್ರಿ ಇದ್ದಾರೆ. ನೋಡೋಕೆ ತುಂಬಾ ಸಂಭಾವಿತರ ರೀತಿ ಕಾಣುತ್ತಾರೆ. ಆದರೆ, ಸಭೆ ಸಮಾರಂಭಗಳಲ್ಲಿ ದುಶ್ಯಾಸನ ತರ ಹೆಣ್ಣುಮಕ್ಕಳ ಸೆರಗು ಎಳೆಯುತ್ತಾರೆ. ಸಾಮಾನ್ಯರ ತರ ಕಾಣುತ್ತಾರೆ. ಆದರೆ, ಕೋಟಿ ಬೆಲೆ ಬಾಳೋ ವಾಚ್ ಕಟ್ಟುತ್ತಾರೆ. ಏನಿವಾಗ’ ಎಂದು ವ್ಯಂಗ್ಯವಾಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !