‘ಟಿಪ್ಪು ಸುಲ್ತಾನ್‌ ಮಹಾನ್ ದೇಶಭಕ್ತ’

7

‘ಟಿಪ್ಪು ಸುಲ್ತಾನ್‌ ಮಹಾನ್ ದೇಶಭಕ್ತ’

Published:
Updated:

ಹೊಸಕೋಟೆ: ‘ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ವೀರ ಟಿಪ್ಪು ಸುಲ್ತಾನ್’ ಎಂದು ಶಾಸಕ ಎನ್.ನಾಗರಾಜು ಬಣ್ಣಿಸಿದರು.

ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

‘ಬಿಜೆಪಿ ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಲಾಗಿತ್ತು. ಈಗ ವಿರೋಧ ಮಾಡುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಭಾರತ ಜಾತ್ಯತೀತ ದೇಶ. ಮೊದಲಿನಿಂದಲೂ ಎಲ್ಲ ಜನಾಂಗದವರು ಒಟ್ಟಾಗಿ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದೇವೆ. ಅದು ಮುಂದುವರಿಯಬೇಕು. ಸಮಾಜ ಒಡೆಯುವ ಕೆಲಸವನ್ನು ಯಾರೂ ಮಾಡಬಾರದು’ ಎಂದರು.

ನಂತರ ಮುಸ್ಲಿಮರು, ಶಾಸಕರಿಗೆ ಖಡ್ಗ ನೀಡಿ ಸನ್ಮಾನಿಸಿದರು. ತಹಶೀಲ್ದಾರ್ ರಮೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !