ಪ್ರೇಮಲತಾಗೆ ಉನ್ನತ ಶ್ರೇಣಿ

ಭಾನುವಾರ, ಏಪ್ರಿಲ್ 21, 2019
25 °C

ಪ್ರೇಮಲತಾಗೆ ಉನ್ನತ ಶ್ರೇಣಿ

Published:
Updated:
Prajavani

ಬೆಂಗಳೂರು: ದೆಹಲಿಯ ಪ್ರಸಾರ ಭಾರತಿ ಹಾಗೂ ಆಕಾಶವಾಣಿ ನಡೆಸುವ ಭಾವಗೀತೆ ವಿಭಾಗದ ಅತ್ಯುನ್ನತ ಶ್ರೇಣಿಯ ಪರೀಕ್ಷೆಯಲ್ಲಿ  ನೀಡಲಾಗುವ ‘ಟಾಪ್ ಗ್ರೇಡ್ ಕಲಾವಿದೆ’ ಗೌರವಕ್ಕೆ ಗಾಯಕಿ ಪ್ರೇಮಲತಾ ದಿವಾಕರ್‌ ಭಾಜನರಾಗಿದ್ದಾರೆ.

ಕಳೆದ ವರ್ಷ ಆಕಾಶವಾಣಿ ನಡೆಸಿದ ಪರೀಕ್ಷೆಯಲ್ಲಿ ಪ್ರೇಮಲತಾ ಭಾಗವಹಿಸಿದ್ದರು. ಕಳೆದ ವಾರ ಫಲಿತಾಂಶ ಪ್ರಕಟವಾಗಿದೆ. ಕನ್ನಡ ಸುಗಮ ಸಂಗೀತದ ಭಾವಗೀತೆ ಗಾಯಕರಲ್ಲಿ ಉನ್ನತ ಶ್ರೇಣಿ ಪಡೆದವರಲ್ಲಿ ಪ್ರೇಮಲತಾ ಕೂಡಾ ಒಬ್ಬರು. ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಜಿ.ಕೆ.ರವೀಂದ್ರಕುಮಾರ್ ಪ್ರಮಾಣಪತ್ರ ವಿತರಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !