ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟರ್‌ ಅರ್ಜಿ ತಿರಸ್ಕೃತ

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಟಗಾರ ನೆಸ್ಟಾ ಕಾರ್ಟರ್‌ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಾಲಯ (ಸಿಎಸಿ) ವಜಾ ಮಾಡಿದೆ. ಇದರಿಂದಾಗಿ ನೆಸ್ಟಾ ಕಾರ್ಟರ್‌ ಅವರೊಂದಿಗೆ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ 4*400 ಮೀಟರ್ಸ್‌ ರಿಲೆಯಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಜಗತ್ತಿನ ಅತಿ ವೇಗದ ಓಟಗಾರ ಉಸೇನ್‌ ಬೋಲ್ಟ್‌ ಕೂಡ ಕಳೆದುಕೊಳ್ಳಲಿದ್ದಾರೆ.

ನೆಸ್ಟಾ ಕಾರ್ಟರ್‌, ಉಸೇನ್‌ ಬೋಲ್ಟ್‌, ಮೈಕೆಲ್‌ ಫ್ರೆಟರ್‌ ಹಾಗೂ ಅಸಾಫಾ ಪೊವೆಲ್‌ ಅವರಿದ್ದ ಜಮೈಕಾದ ತಂಡವು 2008ರ ಬೀಜಿಂಗ್‌ ಒಲಿಂಪಿಕ್ಸ್‌ನ 4*400 ಮೀಟರ್ಸ್‌ ರಿಲೆಯಲ್ಲಿ ಚಿನ್ನ ಗೆದ್ದಿತ್ತು. ಆದರೆ, 2008ರಲ್ಲಿ ನೆಸ್ಟಾ ಅವರು ನೀಡಿದ್ದ ಮೂತ್ರದ ಮಾದರಿಯನ್ನು 2016ರಲ್ಲಿ ಮರುಪರೀಕ್ಷೆಗೊಳಪಡಿಸಿದಾಗ ಅವರು ಉದ್ದೀಪನ ಮದ್ದು ಸೇವನೆ ಮಾಡಿರುವುದು ಧೃಡಪಟ್ಟಿತ್ತು.

ಇದರಿಂದಾಗಿ ಕಾರ್ಟರ್‌ ಹಾಗೂ ಅವರೊಂದಿಗೆ ಸ್ಪರ್ಧಿಸಿದ್ದ ಅಥ್ಲೀಟ್‌ಗಳು ಗೆದ್ದ ಚಿನ್ನದ ಪದಕಗಳನ್ನು ಹಿಂದಿರುಗಿಸಲು ಸಿಎಸಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT