ಮಂಗಳವಾರ, ಅಕ್ಟೋಬರ್ 15, 2019
26 °C

40 ವೃತ್ತಗಳಲ್ಲಿ ಸಮಸ್ಯೆ; ಸಲಹೆ ಕೋರಿದ ಕಮಿಷನರ್

Published:
Updated:
Prajavani

ಬೆಂಗಳೂರು: ನಗರದ ಪ್ರಮುಖ 40 ವೃತ್ತಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅಲ್ಲೆಲ್ಲ ಸಂಚಾರ ದಟ್ಟಣೆ ಕಂಡುಬರುತ್ತಿದೆ. ಇಂಥ ವೃತ್ತಗಳ ಅಭಿವೃದ್ಧಿಗಾಗಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್ ಅವರು ಸಾರ್ವಜನಿಕರ ಸಲಹೆ ಕೋರಿದ್ದಾರೆ.

ಟ್ವೀಟ್ ಮಾಡಿರುವ ಭಾಸ್ಕರ್ ರಾವ್, ‘ವೃತ್ತಗಳ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಅಗತ್ಯವಾಗಿದೆ. ಪತ್ರ, ಇ–ಮೇಲ್, ವಾಟ್ಸ್‌ಆ್ಯಪ್, ಎಸ್‌ಎಂಎಸ್ ಹಾಗೂ ಟ್ವೀಟ್‌ ಮೂಲಕವೂ ಸಲಹೆ ನೀಡಬಹುದು’ ಎಂದು ಹೇಳಿದ್ದಾರೆ. 40 ವೃತ್ತಗಳ ಪಟ್ಟಿ ಅಪ್‌ಲೋಡ್ ಮಾಡಿದ್ದಾರೆ. 

ಕಮಿಷನರ್‌ ಅವರ ಟ್ವೀಟ್‌ನ್ನು 148 ಮಂದಿ ಶೇರ್ ಮಾಡಿದ್ದಾರೆ. 442 ಮಂದಿ ಕಾಮೆಂಟ್ ಮಾಡಿ ಕೆಲ ಸಲಹೆಗಳನ್ನೂ ನೀಡಿದ್ದಾರೆ. 

ಠಾಣಾವಾರು ವೃತ್ತಗಳ ಗುರುತು: ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಹಲವು ತೀವ್ರ ಸಮಸ್ಯೆ ಎದುರಿಸುತ್ತಿರುವ ವೃತ್ತಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ.

ಆಡುಗೋಡಿಯ ಕೃಪಾನಿಧಿ ಕಾಲೇಜು, ಮಾರತ್ತಹಳ್ಳಿ ಸೇತುವೆ, ಶಿವಾನಂದ ವೃತ್ತ, ಸಿಲ್ಕ್ ಬೋರ್ಡ್, ಚಾಲುಕ್ಯ ವೃತ್ತ, ಕಾರ್ಪೊರೇಷನ್ ವೃತ್ತ, ಟಿ‌.ಸಿ. ಪಾಳ್ಯ, ಕೆ.ಆರ್. ಮಾರುಕಟ್ಟೆ ಸೇರಿ 40 ವೃತ್ತಗಳು ಪಟ್ಟಿಯಲ್ಲಿವೆ.

Post Comments (+)