ಎರಡು ದಿನಗಳ ಶಿಕ್ಷಕರ ಕ್ರೀಡಾಕೂಟಕ್ಕೆ ತೆರೆ

7

ಎರಡು ದಿನಗಳ ಶಿಕ್ಷಕರ ಕ್ರೀಡಾಕೂಟಕ್ಕೆ ತೆರೆ

Published:
Updated:
Deccan Herald

ಹೊಸಪೇಟೆ: ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ನಗರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾಕೂಟಕ್ಕೆ ಶನಿವಾರ ಸಂಜೆ ತೆರೆ ಬಿತ್ತು.

ತಾಲ್ಲೂಕಿನ ಆರು ವಲಯ ವ್ಯಾಪ್ತಿಗೆ ಬರುವ ಶಾಲಾ ಶಿಕ್ಷಕರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಇಂತಿದೆ.

ಮಹಿಳಾ ವಿಭಾಗ: ಭಾವಗೀತೆ ಸ್ಪರ್ಧೆ– ಮರಿಯಮ್ಮನಹಳ್ಳಿಯ ಜಿ.ಎಂ.ಎಚ್‌.ಎಸ್‌. ಶಾಲೆಯ (ಪ್ರಥಮ), ಕೆ.ವಿ.ಬಿ. ಶಾಲೆಯ ಗಾದೆಮ್ಮ (ದ್ವಿತೀಯ) ಹಾಗೂ ನಾಗೇನಹಳ್ಳಿಯ ಹೇಮಲತಾ (ತೃತೀಯ).

ಜನಪದ ಗೀತೆ ಸ್ಪರ್ಧೆ: ಟಿ.ಬಿ. ಡ್ಯಾಂನ ಎಚ್‌.ಇ.ಎಸ್‌.ನ ಜಿ.ಕೆ. ರೇಣುಕಮ್ಮ (ಪ್ರಥಮ), ವಾಲ್ಮೀಕಿ ಸರ್ಕಾರಿ ಶಾಲೆಯ ಲಕ್ಷ್ಮಿ (ದ್ವಿತೀಯ), ನಾಗೇನಹಳ್ಳಿಯ ಹೇಮಲತಾ (ತೃತೀಯ).

ಚದುರಂಗ ಸ್ಪರ್ಧೆ: ಬೈಲುವದ್ದಿಗೇರಿ ಜಿ.ಎಚ್‌.ಪಿ.ಎಸ್‌. ಶಾಲೆಯ ಸರಿತಾ (ಪ್ರಥಮ),ಕೆ.ಆರ್. ನಗರ ಶಾಲೆಯ ಸುಕನ್ಯಾ (ದ್ವಿತೀಯ).

ಪುರುಷರ ವಿಭಾಗ: ಚಕ್ರ ಎಸೆತ: ಕುಮಾರಸ್ವಾಮಿ (ಪ್ರಥಮ), ಕುಮಾರಸ್ವಾಮಿ (ದ್ವಿತೀಯ), ಸಂತೋಷಕುಮಾರ (ತೃತೀಯ).

ಜನಪದ ಗೀತೆ ಸ್ಪರ್ಧೆ: ಕೊಂಡನಾಯಕನಹಳ್ಳಿ ಜಿ.ಎಚ್.ಪಿ.ಎಸ್‌. ಶಾಲೆಯ ಬಸವೇಶ್ವರ (ಪ್ರಥಮ), ಬ್ಯಾಲಕುಂದಿ ಜಿ.ಎಚ್.ಪಿ.ಎಸ್. ಶಾಲೆಯ ವೀರೇಶ್ (ದ್ವಿತೀಯ), ಎನ್‌.ಆರ್‌. ಕ್ಯಾಂಪ್‌ನ ಪರಮೇಶ ನಾಯ್ಕ (ತೃತೀಯ).

ಚೆಸ್ ಸ್ಪರ್ಧೆ: ವಿನೋಭಾ ಭಾವೆ ಶಾಲೆಯ ಪ್ರಶಾಂತ (ಪ್ರಥಮ), ವನಿತಾ ಶಾಲೆಯ (ದ್ವಿತೀಯ).
ಭಾವಗೀತೆ ಸ್ಪರ್ಧೆ: ಕಾರಿಗನೂರು ಶಾಲೆಯ ವಿರೂಪಣ್ಣ (ಪ್ರಥಮ), ಎನ್.ಆರ್.ಕ್ಯಾಂಪ್‌ನ ಪರಮೇಶ್ವರ ನಾಯ್ಕ (ದ್ವಿತೀಯ), ಕೆ.ಎನ್‌. ಶಾಲೆಯ ಬಸವೇಶ್ವರ (ತೃತೀಯ).

ಭಕ್ತಿ ಗೀತೆ: ಗೀತಾ ಶಾಲೆಯ ದಸ್ತಗಿರಿ ಸಾಬ್ (ಪ್ರಥಮ), ಹನುಮನಹಳ್ಳಿ ಶಾಲೆಯ ಅಶೋಕ (ದ್ವಿತೀಯ) ಹಾಗೂ ಉಪ್ಪಾರಹಳ್ಳಿಯ ಅಂಬಣ್ಣ (ತೃತೀಯ).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !