ಗುರುವಾರ , ಆಗಸ್ಟ್ 22, 2019
21 °C

‘ಪಾಕಿಸ್ತಾನ ರಾಜತಾಂತ್ರಿಕರ ಪ್ರಯಾಣದ ನಿರ್ಬಂಧ ತೆರವು’

Published:
Updated:

ಇಸ್ಲಾಮಾಬಾದ್ : ಪಾಕಿಸ್ತಾನದ ರಾಯಭಾರಿ ಕಚೇರಿಯ ಸಿಬ್ಬಂದಿ, ರಾಜತಾಂತ್ರಿಕ ಪ್ರಯಾಣ ಕುರಿತಂತೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಹಿಂತೆಗೆದುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ನಿರ್ಬಂಧದ ಅನುಸಾರ, ಪಾಕಿಸ್ತಾನದ ರಾಜತಾಂತ್ರಿಕರು, ರಾಯಭಾರಿ ಕಚೇರಿಯ ಸಿಬ್ಬಂದಿ, ಅವರು ನಿಯೋಜಿತರಾದ ಸ್ಥಳದಿಂದ 25 ಕಿ.ಮೀ. ಅಂತರ ಮೀರಿ ಪ್ರಯಾಣಿಸಲು ಅವಕಾಶವಿರಲಿಲ್ಲ. ಹೆಚ್ಚುವರಿ ಪ್ರಯಾಣಕ್ಕೆ ಐದು ದಿನ ಮೊದಲು ಅಮೆರಿಕದ ಸ್ಥಳೀಯ ಇಲಾಖೆಯ ಅನುಮತಿಯನ್ನು ಪಡೆಯಬೇಕಾಗಿತ್ತು.

ಪ್ರತಿಯಾಗಿ ಪಾಕಿಸ್ತಾನ ಕೂಡಾ ಅಮೆರಿಕ ರಾಜತಾಂತ್ರಿಕರ ವಿರುದ್ಧ ಇಂಥದೇ ನಿರ್ಬಂಧ ಹೇರಿತ್ತು ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ. ಆದರೆ, ಈ ಕುರಿತು ವಿದೇಶಾಂಗ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Post Comments (+)