ವಿಧಾನಸೌಧ ಪ್ರವೇಶ ಪಾಸ್‌ಗಾಗಿ ಜಟಾಪಟಿ!

7
ಸಚಿವಾಲಯ ನೌಕರರು – ಇತರ ನೌಕರರೆಂಬ ತಾರತಮ್ಯ ಆರೋಪ

ವಿಧಾನಸೌಧ ಪ್ರವೇಶ ಪಾಸ್‌ಗಾಗಿ ಜಟಾಪಟಿ!

Published:
Updated:
Deccan Herald

ಬೆಂಗಳೂರು: ರಾಜ್ಯದ ‘ಆಡಳಿತ ಶಕ್ತಿ ಕೇಂದ್ರ’ ವಿಧಾನಸೌಧದಲ್ಲಿ ಸಚಿವಾಲಯ ನೌಕರರು ಮತ್ತು ಇತರ ಇಲಾಖೆಗಳ ನೌಕರರು ಎಂಬ ತಾರತಮ್ಯದ ಅಪಸ್ವರ ಕೇಳಿಬಂದಿದೆ.

‘ಕೆಲವು ಸಚಿವಾಲಯಗಳು ಅಧಿಕಾರಿಗಳು ಮತ್ತು ಸಿಬ್ಬಂದಿ, ಇತರೆ ಇಲಾಖೆಗಳು, ಆಯುಕ್ತಾಲಯಗಳು, ನಿರ್ದೇಶನಾಲಯಗಳು, ನಿಗಮ-ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಚಿವರುಗಳ ಕಚೇರಿಗಳ ಅಧಿಕಾರಿಗಳ ಮತ್ತು ನೌಕರರೇ ಅಲ್ಲ ಎಂಬಂತೆ ತಾತ್ಸಾರದಿಂದ ವರ್ತಿಸುತ್ತಿದ್ದಾರೆ. ಈ ನಡವಳಿಕೆಯಿಂದ ಸರ್ಕಾರಿ ಕೆಲಸಗಳು ವಿಳಂಬವಾಗುತ್ತಿವೆ’ ಎಂಬ ಆರೋಪ ಎದ್ದಿದೆ.

ವಿಧಾನಸೌಧ ಮತ್ತು ವಿಕಾಸಸೌಧದ ಒಳಪ್ರವೇಶಿಸಲು ವಾಹನಗಳಿಗೆ ಪಾಸ್‌ ವಿತರಿಸುವ ವಿಷಯದಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಸಚಿವರ ಆದೇಶದ  ಹೊರತಾಗಿಯೂ ವಿವಿಧ ಇಲಾಖೆಗಳಿಂದ ನಿಯೋಜನೆ, ಅನ್ಯ ಸೇವೆ ಮೇಲೆ ಸಚಿವರ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಪಾಸ್‌ ನೀಡದೆ ಅವಮಾನಗೊಳಿಸಲಾಗುತ್ತದೆ ಎನ್ನಲಾಗಿದೆ.

ಸಚಿವಾಲಯ ನೌಕರರು ಮತ್ತು ಇತರ ಇಲಾಖೆಗಳ ನೌಕರರ ನಡುವೆ ಕಂದಕ ಸೃಷ್ಟಿಸುವ ಇಂತಹ ಬೆಳವಣಿಗಳಿಗೆ ಕಾರಣರಾದ ಸಚಿವಾಲಯ ಸಿಬ್ಬಂದಿಯ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರೊಬ್ಬರ ವಿಶೇಷ ಕರ್ತವ್ಯಾಧಿಕಾರಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !