ಮಗನ ಕಟ್ಟಿಹಾಕಿದ ತಾಯಿ; ಹರಿದಾಡಿದ ವಿಡಿಯೊ

7

ಮಗನ ಕಟ್ಟಿಹಾಕಿದ ತಾಯಿ; ಹರಿದಾಡಿದ ವಿಡಿಯೊ

Published:
Updated:
Prajavani

ಬೆಂಗಳೂರು: ವಿಪರೀತವಾಗಿ ಕಾಡುತ್ತಿದ್ದನೆಂಬ ಕಾರಣಕ್ಕೆ ಮಗನನ್ನು ತಾಯಿಯೊಬ್ಬರು ಹಗ್ಗದಿಂದ ಕಟ್ಟಿಹಾಕಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಹರಿದಾಡಿತು.

ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಡಿಯೊವನ್ನು ಕೆಲವರು ನಗರ ಪೊಲೀಸರ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.

ಬಾಲಕನ ಎರಡು ಕೈಗಳನ್ನು ಹಗ್ಗದಿಂದ ಬಿಗಿದು, ಮನೆಯ ಕಿಟಕಿಯ ಸರಳುಗಳಿಗೆ ಕಟ್ಟಿ ಹಾಕಲಾಗಿದೆ. ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ದಾರಿಹೋಕರು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಬಾಲಕನಿರುವ ಜಾಗ ಗೊತ್ತಾಗಿಲ್ಲ.

‘ವಿಡಿಯೊ ಬೆಂಗಳೂರಿನದ್ದು ಅಥವಾ ಬೇರೆ ಕಡೆಯದ್ದು ಎಂಬುದು ಗೊತ್ತಾಗುತ್ತಿಲ್ಲ. ವಿಡಿಯೊ ಅಪ್‌ಲೋಡ್‌ ಮಾಡಿರುವವರನ್ನು ವಿಚಾರಿಸಿದರೆ ‘ಫಾರ್ವರ್ಡ್‌ ವಿಡಿಯೊ’ ಎನ್ನುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !