ಭಾನುವಾರ, ಅಕ್ಟೋಬರ್ 20, 2019
22 °C

‘ಸಾಮಾಜಿಕ ಜವಾಬ್ದಾರಿ ಪುಸ್ತಕದಲ್ಲೇ ಉಳಿದಿದೆ’

Published:
Updated:
Prajavani

ಬೆಂಗಳೂರು: ‘ಸಾಮಾಜಿಕ ಜವಾಬ್ದಾರಿ ಕೇವಲ ಪುಸ್ತಕಗಳಲ್ಲಿ ಉಳಿದಿದೆ. ಆದರೆ, ಸಮಾಜದ ಮುಖ್ಯಭೂಮಿಕೆಯಲ್ಲಿ ಆ ಜವಾಬ್ದಾರಿ ಮರೆಯಾಗಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಕ್ರಿಯರಾಗುತ್ತಿಲ್ಲ’ ಎಂದು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು. 

‘ಕ್ಯಾಂಪಸ್‌ ಟು ಕಮ್ಯುನಿಟಿ’ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಸ್ವಯಂಸೇವಕರ ಸಭೆ ಹಾಗೂ ‘ಸ್ಕೂಲ್‌ ಬೆಲ್‌’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ನೀಡುತ್ತಿಲ್ಲ.  ಪಠ್ಯೇತರ ಚಟುವಟಿಕೆ ಕುರಿತು ಅರಿಗೆ ಇರುವ ಆಸಕ್ತಿ ಹಾಗೂ ಸಾಮಾಜಿಕ ಕಳಕಳಿ ಆಧರಿಸಿ ಪ್ರವೇಶ ನೀಡುತ್ತಾರೆ’ ಎಂದರು.

ಲೇಖಕ ವಸಂತ ಕುಮಾರ್, ‘ಸರ್ಕಾರಿ ಶಾಲೆಗಳ ಅಭಿವೃದ್ಧಿ ಸರ್ಕಾರದ ಕೆಲಸ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಜನರು ಶಾಲೆಯನ್ನು ತಮ್ಮದೆಂದು ಭಾವಿಸಿ ಅಭಿವೃದ್ಧಿಪಡಿಸಬೇಕು’ ಎಂದು ತಿಳಿಸಿದರು.

ಫರ್ಸ್ಟ್‌ ಅಮೆರಿಕನ್‌ ಸಂಸ್ಥೆಯ ಸಂಗೀತಾ ಫ್ಲೋರ, ಆರ್ಟ್‌ ಮ್ಯಾಟರ್ಸ್‌ ಮುಖ್ಯಸ್ಥ ರಘು ಪೂಜಾರ್‌, ಹೇಮಂತ್‌ ಕಿಂಚಾ ಭಾಗವಹಿಸಿದ್ದರು.

‘ಕ್ಯಾಂಪಸ್‌ ಟು ಕಮ್ಯುನಿಟಿ’ ಸಂಸ್ಥೆಯು ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ‘ಸ್ಕೂಲ್‌ ಬೆಲ್‌’ ಕಾರ್ಯಕ್ರಮದಡಿ 150 ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುತ್ತಿದೆ. ಶಾಲೆಗಳಗೋಡೆಗಳಿಗೆ ಚಿತ್ತಾರ ಬಳಿಯುತ್ತಿದೆ. ಶೈಕ್ಷಣಿಕ ಕಿಟ್‌ ಹಾಗೂ ಕ್ರೀಡಾ ಕಿಟ್‌ ನೀಡುತ್ತಿದೆ.

Post Comments (+)