ಮತದಾರರ ನೋಂದಣಿಗೆ ಇನ್ನೂ ಇದೆ ಅವಕಾಶ

7

ಮತದಾರರ ನೋಂದಣಿಗೆ ಇನ್ನೂ ಇದೆ ಅವಕಾಶ

Published:
Updated:

ಬೆಂಗಳೂರು: ನಗರದ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟವಾಗಿದೆ. 2018ರ ಅಕ್ಟೋಬರ್‌ನಲ್ಲಿ ಕರಡು ಪಟ್ಟಿ ಪ್ರಕಟಿಸಲಾಗಿತ್ತು.  ಎಲ್ಲ ಆಕ್ಷೇಪ, ತಿದ್ದುಪಡಿ ಸಮಸ್ಯೆಗಳನ್ನು ಬಗೆಹರಿಸಿ ಜ. 16ರಂದು ಅಂತಿಮಪಟ್ಟಿ ಬಿಡುಗಡೆಯಾಗಿದೆ. ಹಾಗೆಂದು ಇಲ್ಲಿಗೇ ನೋಂದಣಿ ಮುಕ್ತಾಯ ಆಗಿಲ್ಲ. ಅರ್ಹ ಮತದಾರರ ನೋಂದಣಿಗೆ ಇನ್ನೂ ಅವಕಾಶ ಇದೆ. ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನಾಂಕದ 10 ದಿನಗಳ ಮುಂಚಿನವರೆಗೆ ನೋಂದಣಿ ಮಾಡಬಹುದು.

ಅಂಕಿ ಅಂಶ

* 88, 81,066 - ನಗರದ ಒಟ್ಟು ಮತದಾರರು

* 46,32,900 - ಪುರುಷರು

* 42,48,166 - ಮಹಿಳೆಯರು

* 1,75,183 - ಪಟ್ಟಿಯಿಂದ ಕೈಬಿಟ್ಟ ಮತದಾರರು

* 14,880 (ಪಟ್ಟಿಯಿಂದ ಕೈಬಿಟ್ಟವರ ಗರಿಷ್ಠ ಸಂಖ್ಯೆ * ರಾಜರಾಜೇಶ್ವರಿ ನಗರ)

* 720 (ಪಟ್ಟಿಯಿಂದ ಕೈಬಿಟ್ಟವರ ಕನಿಷ್ಠ ಸಂಖ್ಯೆ * ಪದ್ಮನಾಭನಗರ)

* 67,020 - ಸೇರ್ಪಡೆಯಾದ ಹೊಸ ಮತದಾರರು

* 28,02,842 - 32ರಿಂದ 39ರ ವಯೋಮಾನದ ಮತದಾರರು

* 8,514 - ಒಟ್ಟು ಮತಗಟ್ಟೆಗಳು 

ಮತದಾರರ ಪಟ್ಟಿಯಿಂದ ಕೈಬಿಡಲು ಕಾರಣಗಳು

* ನಿವಾಸಿಗಳು ಬೇರೆಡೆ ಸ್ಥಳಾಂತರಗೊಂಡಿರುವುದು

* ಎರಡೆರಡು ವಿಳಾಸ ಇದ್ದ ಪ್ರಕರಣಗಳು

* ಹೆಸರು ತೆಗೆದುಹಾಕಲು ಕೋರಿದವರು

 **

ಗುರುತಿನ ಚೀಟಿ ಹೊಂದಿದಾಗ ಮತದಾರರೆನಿಸುವುದಿಲ್ಲ. ಅವರ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಇಲ್ಲವೇ ಎಂದು ಖಾತರಿ ಮಾಡಿಕೊಳ್ಳಬೇಕು. ದೇಶದ ಯಾವುದೇ ಭಾಗದ ನಿವಾಸಿ ಇಲ್ಲಿ ನೆಲೆಸಿದರೆ ಅವರ ಹೆಸರನ್ನು ಒಂದು ವಾರದ ಒಳಗೆ ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ. ಒಂದು ವೇಳೆ ನಕಲಿ ಮತದಾರರು (ಬಾಂಗ್ಲಾ ಸೇರಿದಂತೆ ವಿದೇಶಿ ಪ್ರಜೆಗಳು) ಇಲ್ಲಿನ ಗುರುತು ಚೀಟಿ ಹೊಂದಿದ್ದಲ್ಲಿ ಅಂಥ ಪ್ರಕರಣಗಳ ಬಗ್ಗೆ ಗೃಹ ಇಲಾಖೆ ನೋಡಿಕೊಳ್ಳುತ್ತದೆ. 

– ಎನ್‌. ಮಂಜುನಾಥ ಪ್ರಸಾದ್, ಆಯುಕ್ತ ಬಿಬಿಎಂಪಿ

ನೋಂದಣಿಗೆ 

ಆನ್‌ಲೈನ್‌: http://www.ceokarnataka.kar.nic.in /ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ

 
ಹೆಸರು ಬದಲಾವಣೆ, ಆಕ್ಷೇಪ ಸಲ್ಲಿಕೆಗೆ

ಜಿಲ್ಲಾ ಚುನಾವಣಾಧಿಕಾರಿ, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿ ಕಚೇರಿ ಪೈಕಿ ಯಾವುದಾದರೂ ಒಂದು ಕಡೆ ನಮೂನೆ 6,7,8, 8ಎಗಳನ್ನು ಭರ್ತಿ ಮಾಡಿ ದ್ವಿಪ್ರತಿಗಳಲ್ಲಿ ಸಲ್ಲಿಸಬೇಕು. 

ಬಳಸದ ವಿದ್ಯುನ್ಮಾನ ಮತಯಂತ್ರಗಳು

ಕೆ.ಅರ್.ಪುರ, ಗೋವಿಂದರಾಜನಗರ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಳಕೆಯಾದ ಮತಯಂತ್ರಗಳನ್ನು ಈ ಬಾರಿ ಬಳಸುವುದಿಲ್ಲ.

ಕಳೆದ ಬಾರಿಯ ಚುನಾವಣೆಯಲ್ಲಿ ಈ ಯಂತ್ರಗಳಲ್ಲಿ ದೋಷವಿದೆ ಎಂಬ ಆರೋಪ ಮತ್ತು ಕೋರ್ಟ್‌ನಲ್ಲಿ ಪ್ರಕರಣ ಇರುವುದೇ ಇದಕ್ಕೆ ಕಾರಣ.

ಚುನಾವಣಾ ಇಲಾಖೆ ಸಿದ್ಧತೆ

* ಮತದಾರರ ನೋಂದಣಿಗೆ ಮನೆಬಾಗಿಲಿಗೆ ಭೇಟಿ

* ನಿರಂತರ ಹೊಸ ಮತದಾರರ ಸೇರ್ಪಡೆ

* ಇವಿಎಂ, ವಿವಿ ಪ್ಯಾಟ್‌ಗಳ ಸಜ್ಜು

* ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !