ಚಾಲಕನಿಂದ ಮತದಾನ ಜಾಗೃತಿ

ಭಾನುವಾರ, ಏಪ್ರಿಲ್ 21, 2019
26 °C

ಚಾಲಕನಿಂದ ಮತದಾನ ಜಾಗೃತಿ

Published:
Updated:
Prajavani

ಬೆಂಗಳೂರು: ಮತದಾನದ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಾಲಕರೊಬ್ಬರು ಸದ್ದಿಲ್ಲದೆ ಮಾಡುತ್ತಿದ್ದಾರೆ.

ಘಟಕ–33ರ ಚಾಲಕ–ನಿರ್ವಾಹಕ ಯೋಗೇಶ್‌ಗೌಡ ಅವರು ಕರಪತ್ರ ಮುದ್ರಿಸಿಕೊಂಡು ಪ್ರಯಾಣಿಕರಿಗೆ ಹಂಚುತ್ತಿದ್ದು, ಮತದಾನದ ಮಹತ್ವವನ್ನೂ ತಿಳಿಸುತ್ತಿದ್ದಾರೆ.

‘ಮರೆಯದಿರಿ ಮತದಾನ; ಮರೆತರೆ ಬದುಕಿಗಿಲ್ಲ ಸ್ಥಾನಮಾನ, ಮತದಾನ ಮಾಡದೆ ಕಳೆದರೆ ರಜೆ; ಇನ್ನೈದು ವರ್ಷ ಸ್ವಾಭಿಮಾನಕ್ಕೆ ಸಜೆ’ ಎಂಬಿತ್ಯಾದಿ ಘೋಷಣೆಗಳನ್ನು ಸಿದ್ಧಪಡಿಸಿ ಕರಪತ್ರ ಮುದ್ರಿಸಿಕೊಂಡಿದ್ದಾರೆ. ಬಸ್‌ಗೆ ಹತ್ತುವ ಪ್ರಯಾಣಿಕರಿಗೆ ವಿತರಿಸುತ್ತಿದ್ದಾರೆ.

ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿರುವುದಾಗಿ ಯೋಗೇಶ್‌ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !