ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ತಾಲ್ಲೂಕು: ನವ ಜೋಡಿಗಳು, ಬಂಧುಗಳಿಂದ ಮತದಾನ ಜಾಗೃತಿ

Last Updated 31 ಮಾರ್ಚ್ 2019, 14:32 IST
ಅಕ್ಷರ ಗಾತ್ರ

ಹಾವೇರಿ: ಮದುವೆ ಸಂಭ್ರಮದ ನಡುವೆ ಸಾಮಾಜಿಕ ಜಾಗೃತಿಗೆ ವಧು–ವರರು ಹಾಗೂ ಅವರ ಬಂದು ಬಳಗದಿಂದಹಾಗೂ ಸ್ವೀಪ್‌ ಸಮಿತಿ ಅಧಿಕಾರಿಗಳು ಮತದಾನ ಪ್ರತಿಜ್ಞೆವಿಧಿ ಬೋಧಿಸಿ ಮತ್ತು ಕರಪತ್ರಗಳನ್ನು ವಿತರಿಸಿ ಮತದಾನ ಜಾಗೃತಿ ಮಾಡಿದ ಘಟನೆ ಬ್ಯಾಡಗಿ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಭಾನುವಾರ ನಡೆಯಿತು.

ಬ್ಯಾಡಗಿ ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರ ಪೂಜಾರಿ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಸಮಿತಿಯಿಂದ ಕದರಮಂಡಲಗಿ, ಖುರ್ದಕೋಡಿಹಳ್ಳಿ ಹಾಗೂ ಹಿರೇಅಣಜಿ ಗ್ರಾಮಗಳಲ್ಲಿ ನಡೆದ ಮದುವೆ ಸಮಾರಂಭಗಳಲ್ಲಿ ಮತದಾನದ ಜಾಗೃತಿ ಮೂಡಿಸಿದರು.

ಕದರಮಂಡಲಗಿಯ ಶ್ರೀ ಕಾಂತೇಶ್ವರ ದೇವಾಲಯದಲ್ಲಿ ಜರುಗಿದ ಹಾನೂರು-ಹಿರೇಬೂದಿಹಾಳ-ಅರಬಗೊಂಡ ಗ್ರಾಮದ ವಧು-ವರರಾದ ಹರೀಶ್‌ಕುಮಾರ-ವನಿತಾ, ಸುನೀಲ-ವೇದಾ, ಅನಿಲ-ಸುಧಾ ಜೋಡಿಗಳು, ಖುರ್ದಕೋಡಿಹಳ್ಳಿ ವರನ ಸ್ವಗೃಹದಲ್ಲಿ ಜರುಗಿದ ಲಿಂಗರಾಜ-ವಿದ್ಯಾ ಜೋಡಿ ಮತ್ತು ಹಿರೇಅಣಜಿ ಗ್ರಾಮದ ವರನ ಸ್ವಗೃಹದಲ್ಲಿ ನಡೆದ ಹನಮನಗೌಡ-ಕವಿತಾ ಜೋಡಿಗಳ ಮದುವೆ ಸಮಾರಂಭದಲ್ಲಿ ನವಜೋಡಿಗಳು ಮತದಾನ ಪ್ರತಿಜ್ಞೆ ಸ್ವೀಕರಿಸಿದರು.

ಮತದಾನ ಪ್ರತಿಜ್ಞೆಯಲ್ಲಿ ಪಿಡಿಒ ಪರಶುರಾಮ ಅಗಸನಳ್ಳಿ, ನೀಲಪ್ಪ ಕಜ್ಜರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT