ಪ್ರಕಾಶ್‌ ರಾಜ್‌ರನ್ನು ಗೆಲ್ಲಿಸುವ ಅಗತ್ಯವಿದೆ: ಯೋಗೇಂದ್ರ ಯಾದವ್‌

ಮಂಗಳವಾರ, ಏಪ್ರಿಲ್ 23, 2019
27 °C
ಸ್ವರಾಜ್‌ ಇಂಡಿಯಾದ ಅಧ್ಯಕ್ಷ

ಪ್ರಕಾಶ್‌ ರಾಜ್‌ರನ್ನು ಗೆಲ್ಲಿಸುವ ಅಗತ್ಯವಿದೆ: ಯೋಗೇಂದ್ರ ಯಾದವ್‌

Published:
Updated:
Prajavani

ಬೆಂಗಳೂರು: ‘ಸಂವಿಧಾನದ ಆಶಯಗಳು ಅಪಾಯದಲ್ಲಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಪರ್ಯಾಯ ರಾಜಕಾರಣ ಒಂದೇ ಏಕೈಕ ಮಾರ್ಗ, ಅದಕ್ಕಾಗಿ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌ ಅವರನ್ನು ಗೆಲ್ಲಿಸುವ ಅಗತ್ಯವಿದೆ’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್‌ ಅಭಿಪ್ರಾಯಪಟ್ಟರು.

‌‌ನಗರದಲ್ಲಿ ಸೋಮವಾರ ಪ್ರಕಾಶ್‌ ರಾಜ್ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು.

‘ಕರ್ನಾಟಕದಲ್ಲಿ ಪರ್ಯಾಯ ರಾಜಕೀಯಕ್ಕೆ ಪ್ರಕಾಶ್‌ ರಾಜ್‌ ಅಡಿಪಾಯ ಹಾಕಿದ್ದಾರೆ.  ಪ್ರಜಾಪ್ರಭುತ್ವದ ಆಶಯಗಳ ಪರ
ವಾಗಿರುವ ಮತದಾರರು ಅವರನ್ನು ಬೆಂಬಲಿಸಬೇಕು. ಜಾತ್ಯತೀತ ತತ್ವದ ಆಧಾರದ ಮೇಲೆ ವೋಟ್‌ ಮಾಡುವ ಮೂಲಕ ಗೆಲುವಿಗೆ ಕಾರಣವಾಗಬೇಕು’ ಎಂದರು.

‘ದೇಶದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇಂದು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅಂಥ ಹೋರಾಟಗಾರರಲ್ಲಿ ಪ್ರಕಾಶ್ ರಾಜ್ ಮುಂಚೂಣಿಯಲ್ಲಿದ್ದಾರೆ. ಜಾತ್ಯತೀತ ತತ್ವದ ಉಳಿವಿಗಾಗಿ ಹಾಗೂ ಏಕತೆ
ಗಾಗಿ ಮತದಾರರು ಅವರಿಗೆ ಮತ ಹಾಕಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 24

  Happy
 • 3

  Amused
 • 1

  Sad
 • 1

  Frustrated
 • 8

  Angry

Comments:

0 comments

Write the first review for this !