ಹೆಬ್ಬಾಳದಲ್ಲಿ ‘ಮಹಿಳಾ’ ಸಂಭ್ರಮ

ಗುರುವಾರ , ಏಪ್ರಿಲ್ 25, 2019
31 °C

ಹೆಬ್ಬಾಳದಲ್ಲಿ ‘ಮಹಿಳಾ’ ಸಂಭ್ರಮ

Published:
Updated:
Prajavani

ಯಲಹಂಕ: ಹೆಬ್ಬಾಳ–ಕೆಂಪಾಪುರದ ಒಕ್ಕಲಿಗರ ಹಿತರಕ್ಷಣಾ ವೇದಿಕೆಯ ಮಹಿಳಾ ಘಟಕ ಹಾಗೂ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದಿಂದ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ದಿನಾಚರಣೆಯ ಅಂಗವಾಗಿ ಮ್ಯೂಸಿಕಲ್ ಚೇರ್, ಕೇಶವಿನ್ಯಾಸ ಹಾಗೂ ರಂಗೋಲಿ ಸ್ಪರ್ಧೆಗನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಹಿಳೆಯರು ಭರತನಾಟ್ಯ, ಸಾಮೂಹಿಕ ನೃತ್ಯ, ಹಾಡು ಮತ್ತು ಫ್ಯಾಷನ್‌ ಷೋಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 

ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ,‘ತಾಯಂದಿರು ಗಂಡು-ಹೆಣ್ಣು ಮಕ್ಕಳ ವಿಚಾರದಲ್ಲಿ ತಾರತಮ್ಯ ಮಾಡದೆ ಇಬ್ಬರನ್ನೂ ಸಮಾನತೆಯಿಂದ ಬೆಳೆಸಬೇಕು. ಸಮಾಜದಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳು ಹೆಚ್ಚಾಗುತ್ತಿವೆ.ಇದಕ್ಕೆ ಹೆದರಬಾರದು, ಎದುರಿಸಬೇಕು. ಕೌಶಲಗಳನ್ನು ಕರಗತ ಮಾಡಿಕೊಂಡು ಉದ್ಯೋಗ ಗಳಿಸಬೇಕು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !