ವಿಶ್ವಕಪ್ 2007: ಕೆರಿಬಿಯನ್ ದ್ವೀಪದಲ್ಲಿ ವಿಶ್ವಕಪ್ ವೈಚಿತ್ರಗಳು

ಭಾನುವಾರ, ಮೇ 26, 2019
27 °C
ವಿಶ್ವಕಪ್ ಹೆಜ್ಜೆಗುರುತುಗಳು 38

ವಿಶ್ವಕಪ್ 2007: ಕೆರಿಬಿಯನ್ ದ್ವೀಪದಲ್ಲಿ ವಿಶ್ವಕಪ್ ವೈಚಿತ್ರಗಳು

Published:
Updated:
Prajavani

ಏಕದಿನ ಕ್ರಿಕೆಟ್‌ ವಿಶ್ವಕಪ್ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಮೊದಲ ಎರಡು ಪ್ರಶಸ್ತಿ ಗೆದ್ದು ಬೀಗಿದ ವೆಸ್ಟ್‌ ಇಂಡೀಸ್ ಆಟ ಕಣ್ಣಿಗೆ ಕಟ್ಟುತ್ತದೆ. ಅದೇ ವಿಂಡೀಸ್‌ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಟೂರ್ನಿ ಆಯೋಜಿಸುವ ಅವಕಾಶ ಪಡೆದಿದ್ದು 2007ರಲ್ಲಿ.

ಆದರೆ ಆ ಟೂರ್ನಿಯು ವಿಂಡೀಸ್ ಮತ್ತು ವಿಶ್ವದ ಕ್ರಿಕೆಟ್‌ಪ್ರೇಮಿಗಳ ಹಲವು ಅಚ್ಚರಿಯ ಫಲಿತಾಂಶಗಳ ಜೊತೆಗೆ ಕಹಿನೆನಪುಗಳನ್ನೂ ನೀಡಿದ್ದು ದುರಂತ. ಪಾಕಿಸ್ತಾನ ಕೋಚ್ ಬಾಬ್ ವೂಲ್ಮರ್ ಕೊಲೆ ಕ್ರಿಕೆಟ್ ಇತಿಹಾಸಕ್ಕೆ ಕಪ್ಪುಚುಕ್ಕೆಯಾಯಿತು.

l ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡವು ಟೂರ್ನಿಯ ಬಿ ಗುಂಪಿನಲ್ಲಿ ಆಡಿತು. ಈ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಬರ್ಮುಡಾ ತಂಡಗಳು ಇದ್ದವು.

l 2003ರಲ್ಲಿ ಫೈನಲ್ ತಲುಪಿದ್ದ ಭಾರತ ತಂಡವು ವಿಂಡೀಸ್‌ನಲ್ಲಿ ಲೀಗ್‌ ಹಂತದಲ್ಲಿಯೇ ಸೋತು ಹೊರಬಿದ್ದಿತು.

l ಭಾರತ ತಂಡದಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ ಮತ್ತು ಅನಿಲ್ ಕುಂಬ್ಳೆ ಇದ್ದರು.

l ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಆಡಿದ ಮೊದಲ ವಿಶ್ವಕಪ್ ಟೂರ್ನಿ ಇದಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !