ಮಂಗಳವಾರ, ಸೆಪ್ಟೆಂಬರ್ 22, 2020
25 °C

ಲೇಖನ ಬರೆಯಿರಿ ಪ್ರಯಾಣದ ಅವಕಾಶ ಗೆಲ್ಲಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣವು ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ನಿಲ್ದಾಣದ 50 ವರ್ಷಗಳ ಸಂಪೂರ್ಣ ಇತಿಹಾಸದ ಲೇಖನ, ಕತೆಗಳನ್ನು ನಾಗರಿಕರಿಂದ ಆಹ್ವಾನಿಸಲಾಗಿದೆ.‌

ಈ ನಿಲ್ದಾಣದ ಹುಟ್ಟು, ವಿಕಸನ, ಸುದೀರ್ಘ ಪಯಣದ ಬಗ್ಗೆ ಮೌಲ್ಯಾಧಾರಿತ ಮತ್ತು ಅಧಿಕೃತ ಮಾಹಿತಿ, ಇತಿಹಾಸ, ಕತೆಗಳು, ಲೇಖನಗಳಲ್ಲಿ ಸಂಪೂರ್ಣವಾಗಿ ವಿವರಿಸಬೇಕು. ಅದರ ಚಿತ್ರಗಳನ್ನು ಒದಗಿಸಬೇಕು.

‘ವಿಜೇತರಿಗೆ ಕೆಎಸ್‌ಆರ್‌ಟಿಸಿಯ ಅಂಬಾರಿ ಡ್ರೀಮ್‌ ಕ್ಲಾಸ್‌–ಮಲ್ಟಿ ಆಕ್ಸೆಲ್‌ ಸ್ಲೀಪರ್‌ ಬಸ್‌ನಲ್ಲಿ ಎರ್ನಾಕುಲಂ, ಪುಣೆ, ಸಿಕಂದರಾಬಾದ್‌, ವಿಜಯವಾಡಕ್ಕೆ (ಯಾವುದಾದರೂ ಒಂದು ಸ್ಥಳಕ್ಕೆ ಮಾತ್ರ) ಹೋಗಿ–ಬರುವ ಪ್ರಯಾಣಕ್ಕೆ ಉಚಿತ ಟಿಕೆಟ್‌ ನೀಡಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ. 

ಲೇಖನದ ವಿವರಗಳನ್ನು ‌pro@ksrtc.org, ಫೇಸ್‌ಬುಕ್‌ (Facebook/KSRTC.karnataka), ಟ್ವಿಟರ್‌ನಲ್ಲಿ (Twitter/KSRTC_journys)  ಇದೇ 25ರ ಒಳಗೆ ಸಲ್ಲಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು