ಯಲಹಂಕ: ಡಯಾಲಿಸಿಸ್ ಯಂತ್ರಗಳಿಗೆ ಚಾಲನೆ

ಸೋಮವಾರ, ಮಾರ್ಚ್ 25, 2019
21 °C

ಯಲಹಂಕ: ಡಯಾಲಿಸಿಸ್ ಯಂತ್ರಗಳಿಗೆ ಚಾಲನೆ

Published:
Updated:
Prajavani

ಯಲಹಂಕ: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ ಅಳವಡಿಸಿರುವ ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳನ್ನು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಉದ್ಘಾಟಿಸಿದರು.

‘ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ ಮುಖ್ಯಸ್ಥರಾದ ಜೆ.ವಿ.ರಂಗರಾಜು ಅವರು ದೇಣಿಗೆ ನೀಡಿರುವ ₹ 28 ಲಕ್ಷ ವೆಚ್ಚದಲ್ಲಿ 5 ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿಯೇ 7 ಡಯಾಲಿಸಿಸ್ ಯಂತ್ರಗಳನ್ನು ಹೊಂದಿರುವ ಮೊಟ್ಟಮೊದಲ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಇದಾಗಿದೆ’ ಎಂದು ಶಾಸಕರು ತಿಳಿಸಿದರು.

ದಾನಿ ಶ್ರೀದೇವಿ ರಂಗರಾಜು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಸ್ಮ ತಬಸುಮ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಬಿ.ಎಚ್.ಗಣೇಶ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !