ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಾ ವಿ.ವಿ: ವಿಜ್ಞಾನ ಪ್ರದರ್ಶನಕ್ಕೆ ಚಾಲನೆ

Last Updated 2 ಮೇ 2019, 19:31 IST
ಅಕ್ಷರ ಗಾತ್ರ

ಯಲಹಂಕ: ರೇವಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ‘ಪ್ರಾಜೆಕ್ಟ್ ಎಕ್ಸ್ಪೋ – 2019’ಕ್ಕೆ ಗುರುವಾರ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳು ಸಿದ್ಧಪಡಿಸಿರುವ 650 ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಇದರ ಜೊತೆಗೆ ಬಿಇಎಲ್, ಬಿಎಚ್ಇಎಲ್, ಇಸ್ರೊ, ಎಚ್ಎಎಲ್, ಎನ್ಎಎಲ್ ಸೇರಿದಂತೆ 21 ಖಾಸಗಿ ಕಂಪನಿಗಳ ಮಳಿಗೆಗಳು ಇವೆ.

ಐಟಿ ಲೋವ್ಸ್ ಸರ್ವಿಸಸ್‌ ಇಂಡಿಯಾ ಕಂಪನಿಯ ನಿರ್ದೇಶಕ ಶಂಕರ್ ಪಲೆಟ್,‘ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿ, ಅತ್ಯುತ್ತಮ ಮಾದರಿಗಳನ್ನು ಸಿದ್ಧಪಡಿಸಿರುವುದು ಅರ್ಥಪೂರ್ಣವಾಗಿದೆ. ಈ ಮಾದರಿಗಳು ಕಾರ್ಪೋರೆಟ್‌ ವಲಯಕ್ಕೆ ಭವಿಷ್ಯದಲ್ಲಿ ಅನುಕೂಲ ಕಲ್ಪಿಸಲಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೇವಾ ವಿಶ್ವವಿದ್ಯಾಲಯದ ಕುಲಪತಿ ಎಸ್.ವೈ.ಕುಲಕರ್ಣಿ,‘ಪ್ರದರ್ಶನದಲ್ಲಿ ಇರುವ ಸುಮಾರು 100 ಪ್ರಾಜೆಕ್ಟ್‌ಗಳಿಗೆ ಹಕ್ಕುಸ್ವಾಮ್ಯ(ಪೇಟೆಂಟ್) ಪಡೆಯಬಹುದಾಗಿದೆ. ಅತ್ಯುತ್ತಮ ಮಾದರಿಗಳಿಗೆ ವಿಶ್ವವಿದ್ಯಾಲಯದಿಂದ ಹಣಕಾಸಿನ ನೆರವು ನೀಡುತ್ತೇವೆ. ಈ ಪ್ರದರ್ಶನ ವೀಕ್ಷಿಸಲು ಶುಕ್ರವಾರದಂದು ‘ರೇವಾ–ಮುಕ್ತದಿನ’ ಏರ್ಪಡಿಸಲಾಗಿದೆ. ಇದರಲ್ಲಿ ಅಂದಾಜು 25,000 ಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT