ಮಹಿಳೆ ತಬ್ಬಿದ ಹುಡುಗನಿಗೆ ಥಳಿತ

7

ಮಹಿಳೆ ತಬ್ಬಿದ ಹುಡುಗನಿಗೆ ಥಳಿತ

Published:
Updated:

ಬೆಂಗಳೂರು: ಮನೆ ಮುಂದೆ ಕಸಗುಡಿಸುತ್ತಿದ್ದ ಮಹಿಳೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ 17 ವರ್ಷದ ಹುಡುಗನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಜೋಗುಪಾಳ್ಯದಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಂತ್ರಸ್ತೆ ಹಲಸೂರು ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಆ ಹುಡುಗನನ್ನು ಬಂಧಿಸಿ, ನಂತರ ಠಾಣಾ ಜಾಮೀನಿನ ಮೇಲೆ ಬಿಟ್ಟಿದ್ದಾರೆ.

‘ಮನೆ ಅಂಗಳ ಸ್ವಚ್ಛಗೊಳಿಸುತ್ತಿದ್ದಾಗ ಅಪರಿಚಿತ ಹುಡುಗನೊಬ್ಬ ಹಿಂದಿನಿಂದ ತಬ್ಬಿಕೊಂಡ. ಕೂಗಾಡದಂತೆ ಬಾಯಿಯನ್ನೂ ಮುಚ್ಚಿದ. ಆಗ ನೆರೆಮನೆಯವರು ರಕ್ಷಣೆಗೆ ಧಾವಿಸಿದರು. ಅವರನ್ನು ನೋಡುತ್ತಿದ್ದಂತೆಯೇ ನನ್ನನ್ನು ತಳ್ಳಿ ಆತ ಓಡಲಾರಂಭಿಸಿದ. ಕೆಲ ಯುವಕರು ಬೆನ್ನಟ್ಟಿ ಹಿಡಿದುಕೊಂಡರು. ಆರೋಪಿ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !