ಗಣಪತಿ ಮೆರವಣಿಗೆ ವೇಳೆ ಹೊಡೆದಾಡಿಕೊಂಡ ಯುವಕರು

7

ಗಣಪತಿ ಮೆರವಣಿಗೆ ವೇಳೆ ಹೊಡೆದಾಡಿಕೊಂಡ ಯುವಕರು

Published:
Updated:

ಹುಬ್ಬಳ್ಳಿ: ಗಣಪತಿ ಮೆರವಣಿಗೆ ವೇಳೆ ಯುವಕರ ಎರಡು ಗುಂಪು ಹೊಡೆದಾಡಿಕೊಂಡಿರುವ ಘಟನೆ ನಗರದ ಸಿಟಿ ಆಸ್ಪತ್ರೆ ಸಮೀಪ ಗುರುವಾರ ರಾತ್ರಿ ನಡೆದಿದೆ.

ನೃತ್ಯ ಮಾಡುವ ವೇಳೆ ಕಾಲು ತುಳಿದ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ. ಇದು ವಿಕೋಪಕ್ಕೆ ಹೋದಾಗ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅವರನ್ನು ಠಾಣೆಗೆ ಕರೆದೊಯ್ದ ಉಪನಗರ ಠಾಣೆ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ. ಪೋಷಕರಿಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಯುವಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ದೂರುಗಳು ಸಹ ಕೇಳಿ ಬಂದಿದ್ದು, ಪೊಲೀಸರು ಅದನ್ನು ನಿರಾಕರಿಸಿದ್ದಾರೆ. ಅಂತಹ ಸಂದರ್ಭದಲ್ಲಿ ಲಾಠಿ ಪ್ರಹಾರ ಮಾಡಲಾಗದು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !