ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಕಾರ್ಮಿಕನ ಕುಟುಂಬಕ್ಕೆ ₹ 22 ಲಕ್ಷ ‍ಪರಿಹಾರ

Last Updated 27 ಡಿಸೆಂಬರ್ 2019, 13:37 IST
ಅಕ್ಷರ ಗಾತ್ರ

ಬೆಳಗಾವಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕನ ಕುಟುಂಬಕ್ಕೆ ಒಟ್ಟು ₹ 22.23 ಲಕ್ಷ ಪರಿಹಾರ ನೀಡುವಂತೆ ಖಾಸಗಿ ಬಸ್‌ ಮೇಲೆ ವಿಮೆ ಹೊಂದಿರುವ ಕಂಪನಿಗೆ ಇಲ್ಲಿನ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ಇಲ್ಲಿನ ಆಂಜನೇಯ ನಗರ ನಿವಾಸಿ, ಗೌಂಡಿ ಕೆಲಸ ಮಾಡುತ್ತಿದ್ದ ಅಂಕಲೇಶ್ ಅರ್ಜುನ್ ಖೋತ (21) 2018ರ ಮೇ 31ರಂದು ಬೆಳಿಗ್ಗೆ ಅಥಣಿ ತಾಲ್ಲೂಕಿನ ಗಡಿಗೆ ಸಮೀಪದಲ್ಲಿರುವ ಮಹಾರಾಷ್ಟ್ರದ ತನಂಗ್‌ ಬಳಿ ಮೃತಪಟ್ಟಿದ್ದರು. ಸ್ನೇಹಿತನ ಜೊತೆ ಬೈಕ್‌ನಲ್ಲಿ ಹಿಂಬದಿ ಸವಾರನಾಗಿ ಹೋಗುವಾಗ ಖಾಸಗಿ ಬಸ್ ಡಿಕ್ಕಿಯಾಗಿತ್ತು. ಗಾಯಗೊಂಡಿದ್ದ ಅಂಕಲೇಶ್ ಮರು ದಿನ ಮೃತಪಟ್ಟಿದ್ದರು.

ಅವರು ಕೂಲಿ ಕಾರ್ಮಿಕನಾಗಿ ಪಡೆಯುತ್ತಿದ್ದ ವೇತನಕ್ಕೆ ಸಂಬಂಧಿಸಿದಂತೆ ದಾಖಲೆಗಳಿರಲಿಲ್ಲ. ನ್ಯಾಯಾಲಯ ಕೂಲಿ ಕಾರ್ಮಿಕರ ಕನಿಷ್ಠ ವೇತನ ಪರಿಗಣಿಸಿಸಿ ಪರಿಹಾರ ಒದಗಿಸುವಂತೆ ಮಹತ್ವದ ತೀರ್ಪು ನೀಡಿದೆ. ಇಂತಹ ಪ್ರಕರಣ ಇದೇ ಮೊದಲು ಎನ್ನಲಾಗುತ್ತಿದೆ.

ರಾಜ್ಯ ಸರ್ಕಾರವು 2019-20ನೇ ಸಾಲಿಗೆ ಅಕುಲಶ ಕಾರ್ಮಿಕರಿಗೆ ತಿಂಗಳಿಗೆ ₹ 11,500 ಕನಿಷ್ಠ ವೇತನ ನಿಗದಿಪಡಿಸಿದೆ. ಇದನ್ನು ಪರಿಗಣಿಸಿ ಇನ್ನೂ ಕಿರಿಯ ಪ್ರಾಯವಿದ್ದ ಅವರಿಗೆ ಒಟ್ಟು ₹ 18.84 ಲಕ್ಷ ಪರಿಹಾರ ಮತ್ತು ಅದಕ್ಕೆ ಶೇ 9ರಷ್ಟು ಬಡ್ಡಿ ಸೇರಿಸಿ ₹ 22.34 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಧೀಶರಾದ ಪಿ. ಸಂಧ್ಯಾರಾವ್‌ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT