ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 2–2–1968

Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಚರಣ್‌ಸಿಂಗ್ ರಾಜಿನಾಮೆ

ಲಖನೌ, ಫೆ. 1– ಉತ್ತರ ಪ್ರದೇಶದಲ್ಲಿ ಅಧಿಕಾರಾರೂಢವಾಗಿರುವ ಸಂಯುಕ್ತ ವಿಧಾಯಕ ದಳದ ನಾಯಕನ ಸ್ಥಾನಕ್ಕೆ ಮುಖ್ಯಮಂತ್ರಿ ಚರಣ್‌ಸಿಂಗ್‌ರವರು ಇಂದು ರಾಜಿನಾಮೆ ನೀಡಿದರು.

ದಳದ ಸಮನ್ವಯ ಸಮಿತಿಯು ಇಲ್ಲಿ ಸಮಾವೇಶಗೊಂಡಿದ್ದು ಮುಖ್ಯಮಂತ್ರಿಯ ರಾಜಿನಾಮೆ ಪತ್ರವನ್ನು ಪರಿಶೀಲಿಸುತ್ತಿದೆ.

ಸಂಯುಕ್ತ ವಿಧಾಯಕ ದಳದ ಸರ್ಕಾರವು ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿ ಚರಣ್‌ಸಿಂಗ್‌ರವರು ರಾಜಿನಾಮೆ ನೀಡಿರುವುದು ಇದು ಮೂರನೆ ಬಾರಿ.

ಬಡವ–ಬಲ್ಲಿದರ ನಡುವಣ ಅಂತರ ನಿರ್ಮೂಲನವಾಗದೆ  ಶಾಂತಿ ಅಸಾಧ್ಯ: ಇಂದಿರಾ

ನವದೆಹಲಿ, ಫೆ. 1– ಸಂಪನ್ಮೂಲಗಳನ್ನು ಅಗತ್ಯಗಳಿಗೆ ಸರಿ ಹೊಂದಿಸಿ ಆರ್ಥಿಕ ಶಕ್ತಿಯನ್ನು ಪ್ರಗತಿ ಹಾಗೂ ಶಾಂತಿ ಪಥಕ್ಕೆ ಒಯ್ಯುವಂತೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಂಡರು.

ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ ಉದ್ಘಾಟಿಸಿ ತಮ್ಮ ಇಡೀ ಭವಿಷ್ಯವೇ ಪಣವಾಗಿರುವ ಲಕ್ಷೋಪಲಕ್ಷ ಜನರ ಆಸೆ ಆಕಾಂಕ್ಷೆಗಳ ಪೂರೈಕೆಗಾಗಿ ಅವಿಶ್ರಾಂತವಾಗಿ ದುಡಿಯುವಂತೆ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT