₹ 49 ಕೋಟಿ ಜಪ್ತಿ ಮಾಡಿದ ಇಡಿ

7
ಷರತ್ತು ಉಲ್ಲಂಘಿಸಿ ಕಲ್ಲಿದ್ದಲು ಮಾರಿದ ‘ಇಎಂಟಿಎ’

₹ 49 ಕೋಟಿ ಜಪ್ತಿ ಮಾಡಿದ ಇಡಿ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರದ ಷರತ್ತು ಉಲ್ಲಂಘಿಸಿ, ಕಳಪೆ ಗುಣಮಟ್ಟದ ಕಲ್ಲಿದ್ದಲನ್ನು ವಿದ್ಯುತ್‌ ಉತ್ಪಾದನೆಗೆ ಬಳಕೆ ಮಾಡದೆ, ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿದ ‘ಇಎಂಟಿಎ ಕೋಲ್‌ ಮೈನ್ಸ್‌’ನ ₹ 49 ಕೋಟಿ ಠೇವಣಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

2003ರಲ್ಲಿ ಕರ್ನಾಟಕದ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಕೇಂದ್ರ ಸರ್ಕಾರ ಮಹಾರಾಷ್ಟ್ರದ ವಾರ್ಧಾ ಬಳಿ ಕಲ್ಲಿದ್ದಲು ಗಣಿ ಮಂಜೂರು ಮಾಡಿತ್ತು. ಕಲ್ಲಿದ್ದಲು ತೊಳೆದ ಬಳಿಕ ಉಳಿಯುವ ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಮಾರಾಟ ಮಾಡದೆ ವಿದ್ಯುತ್‌ ಉತ್ಪಾದನೆಗೆ ಬಳಸಬೇಕು ಎಂಬ ಷರತ್ತು ಹಾಕಿತ್ತು.

ಈ ಉದ್ದೇಶಕ್ಕೆ ಕೆಪಿಸಿಎಲ್‌, ಕೋಲ್ಕತ್ತಾ ಮೂಲದ ಇಎಂಟಿಎ ಜತೆಗೂಡಿ ಕೆಇಸಿಎಂಎಲ್‌ ಕಂಪೆನಿ ಸ್ಥಾಪನೆ ಮಾಡಿತು. ಕೆಇಸಿಎಂಎಲ್‌ ಪಾಲುದಾರ ಸಂಸ್ಥೆಯೊಂದಿಗೆ ಸೇರಿಕೊಂಡು ಕಳಪೆ ಗುಣಮಟ್ಟದ ಕಲ್ಲಿದ್ದಲನ್ನು ಮಾರಾಟ ಮಾಡಿ ಷರತ್ತು ಉಲ್ಲಂಘಿಸಿತು. ಇದರಿಂದ ಬಂದ ಹಣವನ್ನು ಕೆಪಿಸಿಎಲ್‌ನಲ್ಲಿ ಠೇವಣಿ ಇಟ್ಟಿತ್ತು.

ಈ ಬಗ್ಗೆ ಮಾಹಿತಿ ಪಡೆದ ಜಾರಿ ನಿರ್ದೇಶನಾಲಯ ಕೆಪಿಸಿಎಲ್‌ ಬಳಿಯಿದ್ದ ಠೇವಣಿಯನ್ನು ಜಪ್ತಿ ಮಾಡಿದೆ. ಲೇವಾದೇವಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !