ಸೋಮವಾರ, ಜೂಲೈ 13, 2020
22 °C

ಅಣವಾರ ಗ್ರಾಮದಲ್ಲಿ ಗೃಹಿಣಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಅಣವಾರ ಗ್ರಾಮದಲ್ಲಿ ಶನಿವಾರ ತಡರಾತ್ರಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾನೆ. ಗ್ರಾಮದ ಶ್ರೀದೇವಿ ಮಲ್ಲಪ್ಪ ಪೂಜಾರಿ (36) ಕೊಲೆಯಾದ ದುರ್ದೈವಿ.

ಗ್ರಾಮದ ಹಳೆಮನೆಯಲ್ಲಿ ಕಲ್ಲುಗಳಿಂದ ಜಜ್ಜಿ, ಕಬ್ಬಿಣದ ಸಲಾಕೆಯಿಂದು ಇರಿದು ಕೊಲೆ ಮಾಡಲಾಗಿದೆ. ಆರೋಪಿ ಮಲ್ಲಪ್ಪ ಅಲಿಯಾಸ್ ಮಲ್ಲಿಕಾರ್ಜುನ ಪೂಜಾರಿ ತಲೆಮರೆಸಿಕೊಂಡಿದ್ದಾರೆ.

ಚಿಮ್ಮಾ ಈದಲಾಯಿ ಗ್ರಾಮದ ಶ್ರೀದೇವಿ, ಅಣವಾರದ ಮಲ್ಲಪ್ಪ ಪೂಜಾರಿ ಇಬ್ಬರೂ ಹತ್ತಿರದ ಸಂಬಂಧಿಗಳಾಗಿದ್ದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆನಂತರ ಹೆಣ್ಣು ಮಕ್ಕಳಿಗೆ ಆಸ್ತಿ ಪಾಲು ಬೇಕೆಂದು ನ್ಯಾಯಾಲಯದ ಮೊರೆ ಹೋಗಿ ರಾಜಿ ಮಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಈಗ ಹಣಕ್ಕಾಗಿ ತನ್ನ ಮಗಳನ್ನು ಅಳಿಯ ಕೊಲೆ ಮಾಡಿದ್ದಾನೆ ಎಂದು ಶ್ರೀದೇವಿಯ ಪೋಷಕರು ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಡಿವೈಎಸ್ಪಿ ವೀರಭದ್ರಯ್ಯ, ಸರ್ಕಲ್ ಇನಸ್ಪೆಕ್ಟರ್ ಎಚ್.ಎಂ. ಇಂಗಳೇಶ್ವರ, ಸಬ್ ಇನಸ್ಪೆಕ್ಟರ್ ರಾಜಶೇಖರ ರಾಠೋಡ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು