ಮಂಗಳವಾರ, ಮಾರ್ಚ್ 9, 2021
26 °C

ಗಡಿಯಲ್ಲಿ ನಿಷೇಧಿತ ಔಷಧ ಸಾಗಣೆ; ಆರು ಮಂದಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಾಲ್ಡಾ / ಕೃಷ್ಣಗಂಜ್ (ಪಶ್ಚಿಮಬಂಗಾಳ): ನಿಷೇಧಿತ ಕೆಮ್ಮು ನಿವಾರಕ ಸಿರಫ್‌ ಸಾಗಣೆ ಮಾಡುತ್ತಿದ್ದ ಆರು ಮಂದಿಯನ್ನು ಪಶ್ಚಿಮ ಬಂಗಾಳದ ಭಾರತ – ಬಾಂಗ್ಲಾ ಗಡಿಭಾಗದಲ್ಲಿ ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಗಡಿ ಪ್ರದೇಶದಲ್ಲಿ ನಿಷೇಧಿತ ಕೆಮ್ಮು ನಿವಾರಕ ಸಿರಫ್‌ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳವಾರ ಬಿಎಸ್‌ಎಫ್‌ ಯೋಧರು ಬಂಧಿಸಿದ್ದಾರೆ. ಬಂಧಿತರಿಂದ ನಿಷೇಧಿತ ಕೆಮ್ಮಿನ ಔಷಧಗಳ 1325 ಶೀಷೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ರೀತಿ, ನಾಡಿಯಾದಲ್ಲಿ ಪೊಲೀಸರು ಗೋದಾಮು ಮತ್ತು ಮಾರುಕಟ್ಟೆಯ ಮೇಲೆ ದಾಳಿ ನಡೆಸಿ ದಾಸ್ತಾನು ಮಾಡಲಾಗಿದ್ದ ನಿಷೇಧಿತ 5100 ಕೆಮ್ಮು ನಿವಾರಕ ಔಷಧದ ಶೀಷೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಈ ವರ್ಷದಲ್ಲಿ ಭಾರತ – ಬಾಂಗ್ಲಾ ಗಡಿಭಾಗದಲ್ಲಿ ಗಡಿ ಭದ್ರತಾ ಪಡೆಯವರು ನಿಷೇಧಿತ ಕೆಮ್ಮು ನಿವಾರಕ ಔಷಧಗಳ ಸಾಗಣೆಗೆ ಸಂಬಂಧಿಸಿದಂತೆ 24 ಮಂದಿಯನ್ನು ಬಂಧಿಸಿದ್ದು, 45,590 ಔಷಧದ ಶೀಷೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು