ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ: ಮುಕ್ತ ವ್ಯಾಪಾರಕ್ಕೆ ಅಧಿಸೂಚನೆ

Last Updated 21 ಜುಲೈ 2020, 20:09 IST
ಅಕ್ಷರ ಗಾತ್ರ

ನವದೆಹಲಿ: ರೈತರು ತಮ್ಮಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅನುವು ಮಾಡಿಕೊಡುವ ಎರಡು ಸುಗ್ರೀವಾಜ್ಞೆಗಳ ಅಧಿಸೂಚನೆಯನ್ನು ಕೇಂದ್ರಸರ್ಕಾರ ಹೊರಡಿಸಿದೆ. ರೈತರು ಮಂಡಿಯಿಂದ ಆಚೆಗೆ ಉತ್ಪನ್ನವನ್ನು ಮಾರಲು ಮತ್ತು ಬೆಳೆ ಬೆಳೆಯು
ವುದಕ್ಕೂ ಮುನ್ನ ಖಾಸಗಿಯವರ ಜೊತೆ ಕೃಷಿ ಉತ್ಪನ್ನ ಮಾರಾಟ–ಖರೀದಿ ಒಡಂಬಡಿಕೆ ಮಾಡಿಕೊಳ್ಳಲು ಈ ಸುಗ್ರೀವಾಜ್ಞೆಗಳು ನೆರವಾಗುತ್ತವೆ.

ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು), ಹಾಗೂ ಬೆಲೆ ಖಾತರಿ ಮತ್ತು ಬೇಸಾಯ ಸೇವೆಗಳ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಸುಗ್ರೀವಾಜ್ಞೆಗಳನ್ನು 2020ರ ಜೂನ್ 5ರಂದು ಹೊರಡಿಸಲಾಗಿತ್ತು. ಜುಲೈ 20ರಂದು ಈ ಬಗೆಗಿನ ಅಧಿಸೂಚನೆ ಪ್ರಕಟವಾಗಿದೆ.

ಸರ್ಕಾರದ ಅನುಸೂಚಿಯಲ್ಲಿರುವ ಕೃಷಿ ಮಂಡಿಗಳಷ್ಟೇ ಅಲ್ಲದೆ, ರಾಜ್ಯದೊಳಗೆ ಹಾಗೂ ಹೊರಗೆ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಈ ಸುಗ್ರೀವಾಜ್ಞೆ ಅವಕಾಶ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT