ಬುಧವಾರ, ಆಗಸ್ಟ್ 12, 2020
21 °C

ಸುಶಾಂತ್‌ ಮಾಜಿ ವ್ಯವಸ್ಥಾಪಕಿ ಆತ್ಮಹತ್ಯೆ ಪ್ರಕರಣ: ಬಿಹಾರ ಪೊಲೀಸರಿಂದ ತನಿಖೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ:  ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್‌ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಬಿಹಾರ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

ಸುಶಾಂತ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರ ತಂಡ ಸದ್ಯ ಮುಂಬೈನಲ್ಲಿದೆ. ಇದೇ ತಂಡ ದಿಶಾ ಸಾಲಿಯಾನ್‌ ಆತ್ಮಹತ್ಯೆ ಬಗ್ಗೆಯೂ ತನಿಖೆ ಕೈಗೊಳ್ಳಲಿದೆ.

ಜೂನ್‌ 8ರಂದು ಮಲಾಡ್‌ ಪ್ರದೇಶದ ಎತ್ತರದ ಕಟ್ಟಡದಿಂದ ಜಿಗಿದು ದಿಶಾ ಸಾಲಿಯಾನ್‌ (28) ಆತ್ಮಹತ್ಯೆ ಮಾಡಿಕೊಂಡಿದ್ದರು. ನಟರಾದ ಭಾರತಿ ಸಿಂಗ್‌, ರಿಯಾ ಚಕ್ರವರ್ತಿ ಮತ್ತು ವರುಣ್‌ ಶರ್ಮಾ ಅವರ ಜತೆಗೂ ದಿಶಾ ಕಾರ್ಯನಿರ್ವಹಿಸಿದ್ದರು.

ಸುಶಾಂತ್‌ ಅವರ ಸ್ನೇಹಿತ ಸಿದ್ಧಾರ್ಥ ಪಿಠಾಣಿ ಅವರನ್ನು ಸಹ ಬಿಹಾರ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಕಳೆದ ಒಂದು ವರ್ಷದಿಂದ ಸುಶಾಂತ್‌ ಜತೆ ಸಿದ್ಧಾರ್ಥ ವಾಸಿಸುತ್ತಿದ್ದರು ಎಂದು ಪಟ್ನಾ ವಲಯದ ಐಜಿಪಿ ಸಂಜಯ್‌ ಸಿಂಗ್‌ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸ್ಥಳಗಳಿಗೂ ಪೊಲೀಸ್‌ ಅಧಿಕಾರಿಗಳಿಗೆ ತೆರಳಿ ಪರಿಶೀಲಿಸುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ಇನ್ನೂ ಹಲವರ ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಿಹಾರ ಪೊಲೀಸರು ಇದುವರೆಗೆ 10 ಮಂದಿಯ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು