ಭಾನುವಾರ, ಆಗಸ್ಟ್ 1, 2021
26 °C

Covid-19 India Update| 9 ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 28,498 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ ಮಂಗಳವಾರ 9 ಲಕ್ಷದ ಗಡಿ ದಾಟಿದೆ.

ಇದೇ ವೇಳೆ ಈ 24 ಗಂಟೆಗಳಲ್ಲಿ ಒಟ್ಟಾರೆ 553 ಮಂದಿ ಕೊರೊನಾ ವೈರಸ್‌ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಈ ವರೆಗೆ 23,727 ಮಂದಿ ಪ್ರಾಣ ತೆತ್ತಿದ್ದಾರೆ.

ಸದ್ಯ 9,06,752 ಪಾಸಿಟೀವ್‌ ಪ್ರಕರಣಗಳ ಪೈಕಿ 3,11,565 ಸಕ್ರಿಯ ಪ್ರಕರಣಗಳು ದೇಶದಲ್ಲಿವೆ. 5,71,460 ಮಂದಿ ಗುಣಮುಖರಾಗಿದ್ದಾರೆ. ಇಲ್ಲವೇ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದೇಶದ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ, ಗುಣಮುಖಗೊಂಡವರ ಪ್ರಮಾಣ ಶೇ. 63.02% ಆಗಿದೆ.

ಭಾರತದಲ್ಲಿ ಈ ವರೆಗೆ 1.20 ಕೋಟಿಗೂ ಮಿಗಿಲಾದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಜುಲೈ 13ರ ಸೋಮವಾರ ಒಂದೇ ದಿನ 2,86,247 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿರುವುದಾಗಿ ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ.

ಮಹಾರಾಷ್ಟ್ರದಲ್ಲಿ 2,60,924 (10,482), ತಮಿಳುನಾಡು 1,42,798 (2,032), ದೆಹಲಿ 1,13,740 (3,411), ಗುಜರಾತ್‌ 42,722 (2,055), ಕರ್ನಾಟಕ 41,581 (757) ಸೋಂಕು ಪ್ರಕರಣಗಳು ಈ ವರೆಗೆ ವರದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು