ಶುಕ್ರವಾರ, ಆಗಸ್ಟ್ 14, 2020
27 °C

ಸರ್ಕಾರದ ವೈಫಲ್ಯದ ಬಗ್ಗೆ ಹಾರ್ವರ್ಡ್‌ನಿಂದ ಸಂಶೋಧನೆ: ರಾಹುಲ್‌ ವ್ಯಂಗ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌–19 ನಿರ್ವಹಣೆಯಲ್ಲಿ ಭಾರತ ಸರ್ಕಾರದ ವೈಫಲ್ಯದ ವಿಚಾರವು ಮುಂದಿನ ದಿನಗಳಲ್ಲಿ ಹಾರ್ವರ್ಡ್‌ನ ಸಂಶೋಧನಾ ವಿಷಯಗಳ ಪಟ್ಟಿಗೆ ಸೇರ್ಪಡೆಯಾಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಸೋಮವಾರ ಮತ್ತೆ ಟ್ವೀಟ್‌ ಮೂಲಕ ಟೀಕಿಸಿದ್ದಾರೆ. ‘ಮಹಾಭಾರತ ಯುದ್ಧವನ್ನು 18 ದಿನಗಳಲ್ಲಿ ಜಯಿಸಲಾಗಿತ್ತು. ಕೊರೊನಾ ವಿರುದ್ಧದ ಹೋರಾಟ 21 ದಿನ ತೆಗೆದುಕೊಳ್ಳಲಿದೆ’ ಎಂದು ಹಿಂದೆ ಮೋದಿ ಅವರು ಭಾಷಣದಲ್ಲಿ ಹೇಳಿದ್ದರು. ಈ ಭಾಷಣದ ವಿಡಿಯೊ ತುಣುಕು ಹಾಗೂ ಕೊರೊನಾ ಸೋಂಕಿತ ಮುಂಚೂಣಿಯ ರಾಷ್ಟ್ರಗಳಲ್ಲಿ ಭಾರತವು 3ನೇ ಸ್ಥಾನಕ್ಕೆ ಏರಿರುವುದನ್ನು ಸೂಚಿಸುವ ಗ್ರಾಫ್‌ ಅನ್ನೂ ಟ್ವೀಟ್‌ ಜತೆಗೆ ರಾಹುಲ್‌ ಟ್ಯಾಗ್‌ ಮಾಡಿದ್ದಾರೆ.

‘ಹಾರ್ವರ್ಡ್‌‌ ಬಿಸಿನೆಸ್‌ ಸ್ಕೂಲ್‌ನ ಮುಂದಿನ ಸಂಶೋಧನಾ ವಿಷಯಗಳು 1) ಕೋವಿಡ್‌19 2) ನೋಟು ರದ್ದತಿ 3) ಜಿಎಸ್‌ಟಿ ಜಾರಿ ಆಗಲಿದೆ’ ಎಂದು ರಾಹುಲ್‌ ವ್ಯಂಗ್ಯವಾಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.