ಬುಧವಾರ, ಆಗಸ್ಟ್ 12, 2020
25 °C

ಕೋವಿಡ್‌–19: ಒಂದು ಕೋಟಿಗೂ ಹೆಚ್ಚು ಮಾದರಿಗಳ ಪರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಪತ್ತೆಗಾಗಿ ದೇಶದಲ್ಲಿ ಈವರೆಗೆ  ಒಂದು ಕೋಟಿಗೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದೆ.

ಸೋಮವಾರ ಬೆಳಿಗ್ಗೆ 11ರವರೆಗೆ ಒಟ್ಟು 1,00,4,101 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ಭಾನುವಾರ ಒಂದೇ ದಿನ 1,80,596 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್‌ನ ವಿಜ್ಞಾನಿ ಡಾ. ಲೋಕೇಶ್‌ ಶರ್ಮ ಹೇಳಿದ್ದಾರೆ.

ದೇಶದಲ್ಲೀಗ 1,105 ಪರೀಕ್ಷಾ ಪ್ರಯೋಗಾಲಯಗಳು ಇವೆ. ಈ ಪೈಕಿ 788 ಸರ್ಕಾರಿ ಸ್ವಾಮ್ಯಕ್ಕೆ ಸೇರಿದ್ದರೆ, 317 ಖಾಸಗಿ ಪ್ರಯೋಗಾಲಯಗಳು. ಪ್ರತಿ ದಿನದ ಪರೀಕ್ಷಾ ಸಾಮರ್ಥ್ಯ ಕೂಡ ಹೆಚ್ಚಳವಾಗಿದೆ ಎಂದು ವಿವರಣೆ ನೀಡಿದ್ದಾರೆ.

ಮೇ 25ರಂದು ಪ್ರಯೋಗಾಲಯದಲ್ಲಿ ನಿತ್ಯ  1.5 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಿದ್ದರೆ ಈಗ ಈ ಸಾಮರ್ಥ್ಯ 3 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸುವ ರೀತಿ ಇದೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು