ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸ್ಥಿತಿಗತಿ: ಚೇತರಿಕೆಯ ಹಾದಿಯಲ್ಲಿ ದೆಹಲಿ, ಮುಂಬೈ ಮಹಾನಗರಗಳು

Last Updated 28 ಜುಲೈ 2020, 17:02 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಏರುಗತಿಯಲ್ಲಿದ್ದ ಕೊರೊನಾ ವೈರಸ್‌ ಸೋಂಕು ಜುಲೈನ ಕೊನೆಯ ವಾರದಲ್ಲಿ ಇಳಿಕೆಯಾಗಿರುವುದು ಉಭಯ ನಗರಗಳ ನಿವಾಸಿಗಳಲ್ಲಿ ಸಮಾಧಾನ ತಂದಿದೆ.

ಮಂಗಳವಾರ ದೆಹಲಿ ಮತ್ತು ಮುಂಬೈನಲ್ಲಿ ಸೋಂಕು ಕಳೆದ ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 613 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಮೇ, ಜೂನ್‌ ತಿಂಗಳುಗಳಿಗೆ ಹೋಲಿಕೆ ಮಾಡಿದರೆ 613 ಪ್ರಕರಣಗಳು ತೀರ ಕಡಿಮೆ. ಯಾಕೆಂದರೆ ಮೇ ಮತ್ತು ಜೂನ್‌ ನಲ್ಲಿ ಸಾವಿರದಿಂದ ಆರು ಸಾವಿರ ವರೆಗಿನ ಪ್ರಕರಣಗಳು ವರದಿಯಾಗುತ್ತಿದ್ದವು.

ಮಂಗಳವಾರ 613 ಪ್ರಕರಣಗಳು ವರದಿಯಾಗಿದ್ದು 1497 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಮವಾರ ಒಂದೇ ಒಂದು ಸಾವು ಸಹ ಸಂಭವಿಸಿರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ದೆಹಲಿಯಲ್ಲಿ ಜುಲೈ ತಿಂಗಳ ಆರಂಭದಿಂದಲೂ ಸೋಂಕು ನಿಯಂತ್ರಣಕ್ಕೆ ಬಂದಿದೆ. ಒಟ್ಟು 1.16 ಲಕ್ಷ ಪ್ರಕರಣಗಳು ದಾಖಲಾಗಿದ್ದು ಚೇತರಿಕೆಯ ಪ್ರಮಾಣ ಶೇ 88ರಷ್ಟು ಇದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಐಒಆರ್‌ ಹಾಗೂ ಎಸ್‌ಇಐಆರ್ ಆರೋಗ್ಯ ಸಮೀಕ್ಷೆಗಳ ಪ್ರಕಾರ ದೆಹಲಿಯಲ್ಲಿ ಕೊರೊನಾ ವೈರಸ್‌ ಸೋಂಕು ಆಗಸ್ಟ್‌ ತಿಂಗಳ ಮೂರನೇ ವಾರದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎನ್ನಲಾಗಿದೆ.

ಕಳೆದ 68 ದಿನಗಳಿಂದ ಮುಂಬೈನಲ್ಲಿ ಕೊರೊನಾ ವೈರಸ್‌ ಸೋಂಕು ತೀವ್ರವಾಗಿ ಏರಿಕೆಯ ಹಾದಿಯಲ್ಲಿತ್ತು. ಆದರೆ ಮಂಗಳವಾರ 700 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕು ನಿಯಂತ್ರಣದತ್ತ ಮುಖ ಮಾಡಿದೆ ಎಂದು ಆರೋಗ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

ಮುಂಬೈನಲ್ಲಿ ಇಲ್ಲಿಯವರೆಗೂ 1.10 ಲಕ್ಷ ಪ್ರಕರಣಗಳು ದಾಖಲಾಗಿದ್ದು 6 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಚೇತರಿಕೆಯ ಪ್ರಮಾಣ ಶೇ 73ರಷ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಐಒಆರ್‌ ಹಾಗೂ ಎಸ್‌ಇಐಆರ್ ಆರೋಗ್ಯ ಸಮೀಕ್ಷೆಗಳ ಪ್ರಕಾರ ಮುಂಬೈನಲ್ಲಿ ಕೊರೊನಾ ವೈರಸ್‌ ಸೋಂಕು ಅಕ್ಟೋಬರ್‌ ತಿಂಗಳ ಎರಡನೇ ವಾರದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎನ್ನಲಾಗಿದೆ.

ಮುಂಬೈ ಹಾಗೂ ದೆಹಲಿಯಲ್ಲಿ ಚೇತರಿಕೆ ಕಂಡು ಬರುದಿದ್ದರೆ ದೇಶದ ಇತರೆ ನಗರಗಳಾದ ಬೆಂಗಳೂರು, ಪುಣೆ, ಗೌಹಾಟಿ, ಕೋಲ್ಕತ್ತಾ ನಗರಗಳು ಹೊಸ ಹಾಟ್‌ಸ್ಪಾಟ್‌ಗಳುಗುತ್ತಿವೆ. ಈ ನಗರಗಳಲ್ಲಿ ಸೋಂಕು ತೀವ್ರವಾಗಿ ಏರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT