ಶುಕ್ರವಾರ, ಆಗಸ್ಟ್ 7, 2020
24 °C

ತಿರುಪತಿ: ಹುಂಡಿಗೆ 20 ಚಿನ್ನದ ಗಟ್ಟಿಗಳ ಅರ್ಪಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುಪತಿ: ಇಲ್ಲಿನ ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರ ದೇಗುಲದ ಹುಂಡಿಗೆ ಭಕ್ತರೊಬ್ಬರು 20 ಚಿನ್ನದ ಗಟ್ಟಿ‌ಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.

‘ಶನಿವಾರ ದೇವಾಲಯದ ದಿನದ ಸಂಗ್ರಹ ಮೊತ್ತವನ್ನು ಎಣಿಸುತ್ತಿದ್ದಾಗ ಹುಂಡಿಯಲ್ಲಿ 2 ಕೆ.ಜಿ ತೂಕದ ಚಿನ್ನದ ಗಟ್ಟಿಗಳು ಸಿಕ್ಕಿವೆ’ ಎಂದು ತಿರುಮಲ ತಿರುಪತಿ ದೇವಸ್ಥಾನದ ‌(ಟಿಟಿಡಿ) ಕಾರ್ಯನಿರ್ವಹಣಾ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ತಿಳಿಸಿದರು.

‘ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿದ್ದ ದೇವಸ್ಥಾನದ ದ್ವಾರಗಳನ್ನು ಜೂನ್‌ 11ರಿಂದ ತೆರೆಯಲಾಗಿದ್ದು ಕಳೆದ ತಿಂಗಳು ದೇವಸ್ಥಾನದ ಹುಂಡಿಯಲ್ಲಿ ₹16.7 ಕೋಟಿ ಸಂಗ್ರಹವಾಗಿದೆ. ಲಾಕ್‌ಡೌನ್‌ ತೆರವಿನ ಬಳಿಕ ಕಳೆದ ತಿಂಗಳು 2.5 ಲಕ್ಷ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿದ್ದರು’ ಎಂದು ಅವರು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು